ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಸಾಯಲೆಂದು ಬಂದು ರೈಲ್ವೇ ಟ್ರ್ಯಾಕ್ ನಲ್ಲಿ ನಿದ್ರೆಗೆ ಜಾರಿದ ಯುವತಿ – ಅದೃಷ್ಟವಶಾತ್ ಪಾರು – News Kadaba

ಸಾಯಲೆಂದು ಬಂದು ರೈಲ್ವೇ ಟ್ರ್ಯಾಕ್ ನಲ್ಲಿ ನಿದ್ರೆಗೆ ಜಾರಿದ ಯುವತಿ – ಅದೃಷ್ಟವಶಾತ್ ಪಾರು

(ನ್ಯೂಸ್ ಕಡಬ) newskadaba.com ಬಿಹಾರ, ಸೆ. 12. ಸಾಯಲೆಂದು ರೈಲ್ವೆ ಟ್ರ್ಯಾಕ್‌ ನಲ್ಲಿ ಮಲಗಿದ್ದ ಯುವತಿಯೋರ್ವಳು ರೈಲಿಗಾಗಿ ಕಾದುಕಾದು ಟ್ರ್ಯಾಕ್‌ನಲ್ಲೇ ನಿದ್ದೆಗೆ ಜಾರಿದ ವಿಚಿತ್ರ ಘಟನೆ ಬಿಹಾರದ ಮೋತಿಹಾರಿ ಜಿಲ್ಲೆಯಲ್ಲಿ ನಡೆದಿದೆ.

ಮೊತಿಹಾರ್ ಜಿಲ್ಲೆಯ ರೈಲು ನಿಲ್ದಾಣವೊಂದಕ್ಕೆ ಬಂದಿದ್ದ ಯುವತಿಯೋರ್ವಳು ಅಲ್ಲೇ ಸಮೀಪವಿದ್ದ ರೈಲು ಹಳಿಗಳ ಮೇಲೆ ಮಲಗಿದ್ದಾಳೆ. ಆದರೆ ಎಷ್ಟು ಹೊತ್ತಾದರೂ ರೈಲು ಬಾರದೇ ಇದ್ದು, ಕಾದು ಕಾದು ಸುಸ್ತಾದ ಆಕೆ ಅಲ್ಲೇ ನಿದ್ದೆಗೆ ಜಾರಿದ್ದಳು. ಬಳಿಕ ತುಂಬಾ ಹೊತ್ತಿನ ನಂತರ ರೈಲು ಬಂದಿದ್ದು, ಆದರೆ ಅದೃಷ್ಟವಶಾತ್ ಟ್ರ್ಯಾಕ್ ಮೇಲೆ ಮಲಗಿದ್ದ ಯುವತಿಯನ್ನು ದೂರದಿಂದಲೇ ಗಮನಿಸಿದ ಲೋಕೋ ಪೈಲಟ್, ಎಮರ್ಜೆನ್ಸಿ ಬ್ರೇಕ್ ಹಾಕಿದ್ದಾನೆ. ಪರಿಣಾಮ ಸಾಯಲು ಬಂದಿದ್ದ ಯುವತಿಯ ಜೀವ ಉಳಿದಿದೆ ಎನ್ನಲಾಗಿದೆ. ರೈಲ್ವೆ ಚಾಲಕನ ಈ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಅಲ್ಲದೇ ಅನೇಕರು ಹೀಗೆ ರೈಲ್ವೆ ಟ್ರ್ಯಾಕ್ ಮೇಲೆ ನಿದ್ದೆಗೆ ಜಾರಿದ ಯುವತಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Scroll to Top