ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಆಟವಾಡುತ್ತಾ ಹಾವನ್ನೇ ಕಚ್ಚಿದ ಮಗು – ಹಾವು ಸಾವು – News Kadaba

ಆಟವಾಡುತ್ತಾ ಹಾವನ್ನೇ ಕಚ್ಚಿದ ಮಗು – ಹಾವು ಸಾವು

(ನ್ಯೂಸ್ ಕಡಬ) newskadaba.com ಬಿಹಾರ, ಆ. 21. ಮಗುವೊಂದು ಆಟವಾಡುತ್ತಿದ್ದಾಗ ಹಾವಿನ ಮರಿಯೊಂದನ್ನು ಜಗಿದು ಕೊಂದ ಘಟನೆ ಬಿಹಾರದ ಫತೇಪುರ್ ಪೊಲೀಸ್ ಠಾಣಾ ವ್ಯಾಪ್ತಿಯ ಜಮುಹರ್ ಗ್ರಾಮದಲ್ಲಿ ನಡೆದಿದೆ.

 

ಒಂದು ವರ್ಷದ ಮಗು ಟೆರೇಸ್ ಮೇಲೆ ಆಟವಾಡುತ್ತಿದ್ದ ವೇಳೆ ಹಾವಿನ ಮರಿಯೊಂದು ಮನೆಯ ಟೆರೇಸ್ ಮೇಲೆ ಹರಿದಾಡುತ್ತಾ ಮಗು ಇದ್ದ ಕಡೆ ಬಂದಿದೆ. ಮಗು ಹಾವನ್ನು ಹಿಡಿದು ಅದರೊಂದಿಗೆ ಆಟವಾಡಲು ಆರಂಭಿಸಿದ್ದು, ಆಟವಾಡುತ್ತಲೇ ಹಾವಿನ ಮರಿಯನ್ನು ಬಾಯಲ್ಲಿ ಒತ್ತಿಕೊಂಡು ಜಗಿಯಲು ಆರಂಭಿಸಿದ್ದು ಮಕ್ಕಳಿಗೆ ಗೊತ್ತೇ ಆಗಲಿಲ್ಲ. ಇನ್ನು ಹಾವಿನ ಮರಿ ಮಗು ಜಗಿದಿದ್ದರಿಂದ ತೀವ್ರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದೆ. ಹಾವಿನ ಮರಿಯನ್ನು ಮಗು ಜಗಿಯುತ್ತಿರುವುದನ್ನು ಕಂಡ ಮಗುವಿನ ತಾಯಿ ಕೂಡಲೇ ಮಗುವಿನ ಬಾಯಲ್ಲಿದ್ದ ಹಾವನ್ನು ಹೊರತೆಗೆದು ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ವೈದ್ಯರ ಬಳಿ ಮಗುವನ್ನು ಕರೆದೊಯ್ದು ತಪಾಸಣೆ ನಡೆಸಿದಾಗ ಭಯಪಡುವ ಅಗತ್ಯವಿಲ್ಲ, ಮಗು ಸಂಪೂರ್ಣ ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ.

Scroll to Top