ರಾಷ್ಟ್ರಧ್ವಜ ಕಂಬಕ್ಕೆ ವಿದ್ಯುತ್ ಸ್ಪರ್ಶ..!           ಚರ್ಚ್ ನ ಪಾದ್ರಿ ಮೃತ್ಯು..!                

(ನ್ಯೂಸ್ ಕಡಬ) newskadaba.c0m ಕಾಸರಗೋಡು, ಆ. 16.  ಸ್ವಾತಂತ್ರ್ಯ ದಿನಾಚರಣೆಯ ಬಳಿಕ ರಾಷ್ಟ್ರಧ್ವಜವನ್ನು ಕೆಳಗಿಳಿಸುವಾಗ ಚಿಕ್ಕ ವಯಸ್ಸಿನ ಚರ್ಚ್‌ನ ಪಾದ್ರಿಯೊಬ್ಬರು ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಘಟನೆ ಸಂಭವಿಸಿದೆ.

ಮೃತಪಟ್ಟ ವ್ಯಕ್ತಿಯನ್ನು ಮುಳ್ಳೇರಿಯ ಇನ್‌ಫೆಂಟ್ ಜೀಸಸ್ ಚರ್ಚ್‌ನ ಧರ್ಮಗುರು ಫಾದರ್ ಮ್ಯಾಥ್ಯೂ ಕುಡಿಲಿಲ್ (29) ಎಂದು ಗುರುತಿಸಲಾಗಿದೆ. ಧ್ವಜ ಕಂಬ ಒಂದು ಬದಿಗೆ ವಾಲಿದಾಗ ಪಕ್ಕದ ವಿದ್ಯುತ್ ತಂತಿಗೆ ತಾಗಿ ವಿದ್ಯುತ್ ಸ್ಪರ್ಶಿಸಿದೆ ಎನ್ನಲಾಗಿದೆ.

Scroll to Top