ಕಾಲೇಜು ಕ್ಯಾಂಪಸ್‌ ನಲ್ಲಿ ಹಿಜಾಬ್ ನಿಷೇಧಿಸುವ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ..!

(ನ್ಯೂಸ್ ಕಡಬ)newskadaba.com ನವದೆಹಲಿ, ಆ.10.  ಕಾಲೇಜು ಕ್ಯಾಂಪಸ್ ಗಳಲ್ಲಿ ಹಿಜಾಬ್ ನಿಷೇಧಿಸುವ ಮುಂಬೈ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ತಿಳಿದು ಬಂದಿದೆ.

ಕಾಲೇಜುಗಳಲ್ಲಿ ಹಿಜಾಬ್, ಬುರ್ಖಾ ನಿಷೇಧಿಸಿರುವ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಕುರಿತು ಮುಂಬೈ ಎಜುಕೇಶನಲ್ ಸೊಸೈಟಿಯಿಂದ ಪ್ರತಿಕ್ರಿಯೆ ಕೇಳಿದ್ದು,ಕ್ಯಾಂಪಸ್‌ನೊಳಗೆ ‘ಹಿಜಾಬ್, ಬುರ್ಖಾ, ಕ್ಯಾಪ್ ಮತ್ತು ನಖಾಬ್’ ನಿಷೇಧಿಸುವ ಮುಂಬೈ ಕಾಲೇಜಿನ ಸುತ್ತೋಲೆಗೆ ನ್ಯಾಯಾಲಯ ಭಾಗಶಃ ತಡೆ ನೀಡಿದೆ ಎಂದು ವರದಿಯಾಗಿದೆ.

 

 

Scroll to Top