
(ನ್ಯೂಸ್ ಕಡಬ) newskadaba.com, ನ 05. ಕಡಬದ ಎರಡನೇ ಆಟೋರಿಕ್ಷಾ ನಿಲ್ದಾಣದ ಚಾಲಕ ಬೇಬಿ ಕೃಷ್ಣ (49) ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ನವೆಂಬರ್ 4ರಂದು ಹಿಂದಿ ಮಾತನಾಡುವ ವ್ಯಕ್ತಿಯೊಬ್ಬ ಕುರಿಯಾಳಕೊಪ್ಪಕ್ಕೆ ಆಟೋ ಬಾಡಿಗೆಗೆ ಪಡೆದಿದ್ದನು. ಅಲ್ಲಿಗೆ ತೆರಳಿದ ಬಳಿಕ ಬಾಡಿಗೆ ಹಣ ನೀಡದೆ ಸತಾಯಿಸಿದ್ದಲ್ಲದೆ, ಚಾಲಕ ಹಣ ಕೇಳಲು ಹೋದಾಗ ಇತರ 3-4 ಜನರೊಂದಿಗೆ ಸೇರಿಕೊಂಡು ಆಟೋ ತೆರಳದಂತೆ ತಡೆದು ಹಲ್ಲೆ ನಡೆಸಿದ್ದಾರೆ.
ಕಡಬ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 129/2026 ರಡಿ ಬಿಎನ್ಎಸ್ ಸೆಕ್ಷನ್ 126(2), 115(2) ಹಾಗೂ 3(5)ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.




