
(ನ್ಯೂಸ್ ಕಡಬ) newskadaba.com, ನ 05. ಉಳ್ಳಾಲ: ಬೇಕರಿಗೆ ನುಗ್ಗಿ ₹30 ಸಾವಿರ ನಗದು ಕಳವು – ಸಿಸಿಟಿವಿಯಲ್ಲಿ ಕಳ್ಳನ ಕೃತ್ಯ ಸೆರೆ!
ತೊಕ್ಕೊಟ್ಟು ಒಳಪೇಟೆಯ ಬಿ.ಆರ್. ಬೇಕರಿಯ ಹಿಂಬದಿಯ ಗೋಡೆ ಕೊರೆದು ಒಳನುಗ್ಗಿದ ಕಳ್ಳನೋರ್ವ, ಕ್ಯಾಷ್ ಡ್ರಾವರ್ ಒಡೆದು ₹30,000 ನಗದು ಹಾಗೂ ಮೊಬೈಲ್ ಕಳವುಗೈದಿದ್ದಾನೆ.
ಕಳೆದ ತಡರಾತ್ರಿ ನಡೆದ ಈ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಉಳ್ಳಾಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.




