
(ನ್ಯೂಸ್ ಕಡಬ) newskadaba.com, ನ 05.ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದ ಕ್ಷಣದಿಂದಲೇ 24 ಗಂಟೆಗಳ ಅವಧಿ ಆರಂಭವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.ಅಧಿಕೃತ ಬಂಧನದ ದಾಖಲೆ ಸಿದ್ಧಪಡಿಸಿದ ಸಮಯದಿಂದಲ್ಲ, ವ್ಯಕ್ತಿಯ ಸ್ವಾತಂತ್ರ್ಯ ನಿರ್ಬಂಧಿಸಿದ ಕ್ಷಣದಿಂದಲೇ 24 ಗಂಟೆಗಳ ಲೆಕ್ಕ ಆರಂಭವಾಗಲಿದೆ.
ಈ ಅವಧಿಯೊಳಗೆ ಆರೋಪಿಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುವುದು ಕಡ್ಡಾಯ. ಬಂಧನ ಮತ್ತು ಕಸ್ಟಡಿ ನಡುವೆ ಕೃತಕ ವ್ಯತ್ಯಾಸ ಸೃಷ್ಟಿಸಿ ಕಾನೂನು ನಿಯಮಗಳನ್ನು ತಪ್ಪಿಸುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.NDPS ಪ್ರಕರಣವೊಂದರಲ್ಲಿ ನಾಲ್ವರನ್ನು 24 ಗಂಟೆಗಳೊಳಗೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸದ ಹಿನ್ನೆಲೆಯಲ್ಲಿ, ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.




