ಭಾರತದಲ್ಲಿ ನಮ್ಮ ಹೂಡಿಕೆ-ಆಸ್ತಿ ರಕ್ಷಣೆ ವಿಶೇಷ ಮಸೂದೆ ಜಾರಿಗೆ ತನ್ನಿ..! ಪ್ರಧಾನಿ ಮೋದಿಗೆ NRIಗಳ ಆಗ್ರಹ..!

(ನ್ಯೂಸ್ ಕಡಬ)newskadaba.com ನವದೆಹಲಿ, ಆ.10. ವಂಚನೆಯಿಂದಾಗಿ ಅನಿವಾಸಿ ಭಾರತೀಯರು ಅಪಾರ ಪ್ರಮಾಣದ ಆರ್ಥಿಕ ನಷ್ಟ ಅನುಭವಿಸುತ್ತಿದ್ದು, ತಮ್ಮ ಹೂಡಿಕೆ, ಉಳಿತಾಯ ಹಾಗೂ ಆಸ್ತಿ-ಪಾಸ್ತಿಗಳ ರಕ್ಷಣೆಗೆ ವಿಶೇಷ ಮಸೂದೆ ಜಾರಿಗೆ ತರುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿಕೊಂಡಿದ್ದಾರೆ.


ಈ ಸಂಬಂಧ ವಿಜಯಪುರದ ಬಿಜೆಪಿ ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ರಮೇಶ ಜಿಗಜಿಣಗಿ ಅವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದು, ಮಸೂದೆ ಕುರಿತು ಚರ್ಚಿಸಲು ತುರ್ತು ಸಭೆ ನಡೆಸುವಂತೆ ಮನವಿ ಮಾಡಿಕೊಂಡಿದ್ದಾರೆ.


NRI ಕುಂದುಕೊರತೆಗಳ ಗುಂಪಿನ ಅಂತರರಾಷ್ಟ್ರೀಯ ಸಂಚಾಲಕ ಮತ್ತು ಅರಿಜೋನಾದ ಫೀನಿಕ್ಸ್ ನಗರದ ಮೂಲದ ಟೆಕ್ ವೃತ್ತಿಪರ ಸುಭಾಸ್ ಬಾಳಪ್ಪನವರ್ ಅವರು ಮಾತನಾಡಿ, ಅನಿವಾಸಿಗಳ ಭಾರತೀಯರ ಹೂಡಿಕೆ ಹಾಗೂ ಆಸ್ತಿ ರಕ್ಷಣೆಗೆ ವಿಶೇಷ ಮಸೂದೆ ಜಾರಿಗೆ ತರುವಂತೆ ಪ್ರಧಾನಿ ಮೋದಿ ಮನವಿ ಮಾಡಿಕೊಳ್ಳುತ್ತಿದ್ದೇವೆ. ಈ ಬಗ್ಗೆ ಅವರ ಸಂಪುಟದ ಸಚಿವರೊಂದಿಗೆ ಸಭೆ ನಡೆಸುವಂತೆಯೂ ಒತ್ತಾಯಿಸುತ್ತಿದ್ದೇವೆಂದು ಹೇಳಿದ್ದಾರೆ.

Scroll to Top