ಲೋಕಸಭಾ ಚುನಾವಣೆಗೆ ಅಪಕೀರ್ತಿ ತರಲು ಸುಳ್ಳು ಪ್ರಚಾರ                     ಚುನಾವಣಾ ಆಯೋಗ                      

(ನ್ಯೂಸ್ ಕಡಬ) newskadaba.com ನವದೆಹಲಿ, ಆ.05. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಲೋಕಸಭಾ ಚುನಾವಣೆಗೆ ಅಪಕೀರ್ತಿ ಮೂಡಿಸುವುದಕ್ಕೆ ಸುಳ್ಳು ಪ್ರಚಾರ ನಡೆದಿದೆ ಎಂದು ಚುನಾವಣಾ ಆಯೋಗ ಹೇಳಿದೆ.

ಸಿಟಿಜನ್ಸ್ ಪ್ಲಾಟ್ ಫಾರ್ಮ್ ವಿಶ್ಲೇಷಣೆಯನ್ನು ತಿರಸ್ಕರಿಸಿರುವ ಚುನಾವಣಾ ಆಯೋಗ ಇದು ಸುಳ್ಳು ಪ್ರಚಾರ ಎಂದು ಹೇಳಿದೆ. ಲೋಕಸಭಾ ಚುನಾವಣೆಯ ವೇಳೆಯಲ್ಲಿ ಆರಂಭದಲ್ಲಿ ಘೋಷಿಸಿದ್ದ ಮತದಾನದ ಪ್ರಮಾಣಕ್ಕೂ ಅಂತಿಮವಾಗಿ ಘೋಷಣೆ ಮಾಡಿದ್ದ ಮತದಾನದ ಪ್ರಮಾಣಕ್ಕೂ ವ್ಯತ್ಯಾಸವಿದೆ ಎಂದು ಸಿಟಿಜನ್ಸ್ ಪ್ಲಾಟ್ ಫಾರ್ಮ್ ವಿಶ್ಲೇಷಿಸಿತ್ತು.

 

 

Scroll to Top