ರಾಜ್ಯದಲ್ಲಿ ‘ವಿವಾಹ ನೋಂದಣಿ’ ಈಗ ಇನ್ನಷ್ಟು ಸುಲಭ

(ನ್ಯೂಸ್‌ ಕಡಬ) newskadaba ಬೆಂಗಳೂರು, ಮಾ.09: ಈವರೆಗೆ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಮಾತ್ರ ವಿವಾಹ ನೋಂದಣಿಯನ್ನು ಕೈಗೊಳ್ಳಲಾಗುತ್ತಿತ್ತು. ಆದರೆ, ರಾಜ್ಯ ಸರ್ಕಾರ ಈ ಪ್ರಕ್ರಿಯೆಯನ್ನು ಇನ್ನಷ್ಟು ಸುಗಮಗೊಳಿಸಿದೆ. ಉಪ ನೋಂದಣಾಧಿಕಾರಿಗಳ ಕಚೇರಿಗೆ ಅಲೆದಾಟ ತಪ್ಪಿಸಲು ಕ್ರಮ ಕೈಗೊಂಡಿದೆ.

ವಿವಾಹ ನೋಂದಣಿಯನ್ನು ಜನಸ್ನೇಹಿಯಾಗಿಸಲು ಕಾವೇರಿ 2.0 ತಂತ್ರಾಂಶದಲ್ಲಿ ಆನ್ಲೈನ್ ಮೂಲಕ ನೋಂದಣಿ ಮಾಡಲು ಮತ್ತು ಗ್ರಾಮ ಪಂಚಾಯಿತಿಗಳಲ್ಲಿನ ಬಾಪೂಜಿ ಸೇವಾ ಕೇಂದ್ರ ಹಾಗೂ ಗ್ರಾಮ-1 ಕೇಂದ್ರಗಳಲ್ಲಿಯೂ ಸಹ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ಕಲ್ಪಿಸಿದೆ.

https://kaveri.karnataka.gov.in/ ಭೇಟಿ ನೀಡಿ ಮತ್ತು ಬಳಕೆದಾರರ ಖಾತೆ ಸೃಜಿಸಿ ಕಾವೇರಿ ಪೋರ್ಟಲ್ಗೆ ಲಾಗಿನ್ ಮಾಡಿ, ವಿವಾಹ ನೋಂದಣಿ ಸೇವೆ ಆಯ್ಕೆಮಾಡಿ ಮತ್ತು ವಿವರ ನಮೂದಿಸಿ ಅರ್ಜಿ ಸಲ್ಲಿಸಿ.

Also Read  ಮಟನ್ ಸಾರು ಮಾಡುವ ವಿಚಾರದಲ್ಲಿ ನಡೆಯಿತು ಕೊಲೆ!

ಹೆಚ್ಚಿನ ಮಾಹಿತಿಗಾಗಿ 080 68265316 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

error: Content is protected !!
Scroll to Top