ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಸದಸ್ಯರಾಗಿ ಹಮೀದ್ ತಂಙಳ್ ಮರ್ಧಾಳ ನೇಮಕ

(ನ್ಯೂಸ್ ಕಡಬ) newskadaba.com ಕಡಬ, ಎ.20. ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಸದಸ್ಯರಾಗಿ ಸಯ್ಯದ್ ಹಮೀದ್ ತಂಙಳ್ ಮರ್ಧಾಳ ಅವರನ್ನು ಆಯ್ಕೆ ಮಾಡಲಾಗಿದೆ.

ಧಾರ್ಮಿಕ ಮುಖಂಡರಾಗಿರುವ ಇವರು ಕಡಬ ತಾಲೂಕು ಮುಸ್ಲಿಂ ಜಮಾಅತ್ ಸದಸ್ಯರಾಗಿ, ಎಸ್.ವೈ.ಎಸ್. ಸದಸ್ಯರಾಗಿ, ಪ್ರಸ್ತುತ ಮರ್ಧಾಳ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರನ್ನು ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಸದಸ್ಯರಾಗಿ ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ.

Scroll to Top