ಭೂಕುಸಿತ- 54 ಮಂದಿ ಮೃತ್ಯು, 63 ಮಂದಿ ನಾಪತ್ತೆ..!

(ನ್ಯೂಸ್ ಕಡಬ) newskadaba.com ಫಿಲಿಪೈನ್ಸ್‌, ಫೆ. 12.  ದಕ್ಷಿಣ ಫಿಲಿಪೈನ್ಸ್ ನ ಚಿನ್ನದ ಗಣಿಗಾರಿಕೆ ನಡೆಯುತ್ತಿದ್ದ ಸ್ಥಳದಲ್ಲಿ ಭಾರಿ ಭೂಕುಸಿತ ಉಂಟಾದ ಪರಿಣಾಮ  54 ಮಂದಿ ಮೃತಪಟ್ಟು, 63 ಜನರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವಾರದಿಂದ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ ಭಾರೀ ಭೂಕುಸಿತ ಸಂಭವಿಸಿದೆನ್ನಲಾಗಿದೆ. ಘಟನೆಯಿಂದ ಸುಮಾರು 50 ಗಂಟೆಗಳ ಕಾಲ ಅವಶೇಷಗಳಡಿ ಹೂತುಹೋಗಿದ್ದ ಮೂರು ವರ್ಷದ ಬಾಲಕಿಯೋರ್ವಳನ್ನು ರಕ್ಷಣಾ ಪಡೆ ಜೀವಂತವಾಗಿ ಹೊರತೆಗೆದಿದ್ದು ಕಾರ್ಯಾಚರಣೆ ಮುಂದುವರೆದಿದೆ.

Scroll to Top