ಸುಳ್ಯ: ಕಾರಿಗೆ ಬೈಕ್‌ ಡಿಕ್ಕಿ- ಸವಾರರಿಗೆ ಗಾಯ

(ನ್ಯೂಸ್ ಕಡಬ) newskadaba.com ಸುಳ್ಯ, ಫೆ. 12. ಕಾರಿನ ಹಿಂಭಾಗಕ್ಕೆ ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ರಸ್ತೆಗೆಸೆಯಲ್ಪಟ್ಟು, ಗಾಯಗೊಂಡ ಘಟನೆ ಅರಂತೋಡಿನ ಹೈಸ್ಕೂಲ್ ಬಳಿ ಇಂದು ಬೆಳಿಗ್ಗೆ ನಡೆದಿದೆ.

ಸುಳ್ಯದ ಶೋ ರೂಮ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕರು, ಅರಂತೋಡಿನಿಂದ ಸುಳ್ಯದ ಕಡೆ ತೆರಳುತ್ತಿದ್ದ ವೇಳೆ, ಮುಂಭಾಗದಿಂದ ತೆರಳುತ್ತಿದ್ದ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ರಸ್ತೆಗೆಸೆಯಲ್ಪಟ್ಟ ಸವಾರರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

error: Content is protected !!
Scroll to Top