ಉಳ್ಳಾಲ: ಸೋಮೇಶ್ವರ ಸಮುದ್ರತೀರದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಉಳ್ಳಾಲ, ಫೆ. 12. ಸೋಮೇಶ್ವರ ಸಮುದ್ರತೀರದಲ್ಲಿ ಅಪರಿಚಿತ ಮೃತದೇಹವೊಂದು ಇಂದು ಮಧ್ಯಾಹ್ನದ ವೇಳೆ ಪತ್ತೆಯಾಗಿರುವ ಕುರಿತು ವರದಿಯಾಗಿದೆ.

ಮೃತರು ಬಿಳಿ ಅಂಗಿ ಕಪ್ಪು ಪ್ಯಾಂಟ್ ಧರಿಸಿದ್ದು, ಇಂದು ಬೆಳಗ್ಗೆ ಸಮುದ್ರ ತೀರದ ರುದ್ರಪಾದೆಯಿಂದ ವ್ಯಕ್ತಿಯೋರ್ವರು ಸಮುದ್ರಕ್ಕೆ ಹಾರಿರುವುದನ್ನು ದೇವಸ್ಥಾನದ ಅರ್ಚಕರೊಬ್ಬರು ಕಂಡಿದ್ದರು ಎನ್ನಲಾಗಿದೆ. ಸ್ಥಳಕ್ಕಾಗಮಿಸಿದ ಉಳ್ಳಾಲ ಪೊಲೀಸರು ವ್ಯಕ್ತಿಯ ಗುರುತು ಪತ್ತೆ ಹಚ್ಚುವಿಕೆಗೆ ಕ್ರಮಕೈಗೊಂಡಿದ್ದಾರೆ.

error: Content is protected !!
Scroll to Top