ವಿಶೇಷ ಪೊಲೀಸ್ ಅಧಿಕಾರಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com ಜಮ್ಮು, ಸೆ. 26. ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ವಿಶೇಷ ಪೊಲೀಸ್ ಅಧಿಕಾರಿಯೊಬ್ಬರ ಮೃತದೇಹವು ಕಾಂಕೋಟೆ ಗ್ರಾಮದ ಬಳಿಯ ಮುಖ್ಯ ರಸ್ತೆಯಿಂದ 10 ಅಡಿ ಕೆಳಗೆ ಪತ್ತೆಯಾಗಿರುವ ಕುರಿತು ವರದಿಯಾಗಿದೆ.

ಮೃತರನ್ನು ಎಸ್‍ಪಿಒ ಖಾಲಿಕ್ ಹುಸೇನ್ ಎಂದು ಗುರುತಿಸಲಾಗಿದೆ. ಪೂಂಚ್ ಜಿಲ್ಲಾ ಪೊಲೀಸ್ ಲೈನ್ಸ್‍ನಲ್ಲಿ ನಿಯೋಜಿಸಲಾಗಿದ್ದ ಹುಸೇನ್ ಅವರ ತಲೆಗೆ ಗಾಯಗಳಾಗಿದ್ದು, ಪ್ರಾಥಮಿಕ ತನಿಖೆಯಿಂದ ಅವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.

Scroll to Top