(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 17. ಇನ್ನುಮುಂದೆ ಹಳೆಯ ಅಂದರೆ ಏಪ್ರಿಲ್ 2019ರ ಮೊದಲ ನೋಂದಣಿಯ ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ ಮಾಡಲಾಗಿದ್ದು, ನವೆಂಬರ್ 17ರಂದು HSRP ನಂಬರ್ ಪ್ಲೇಟ್ ಅಳವಡಿಕೆಗೆ ಕೊನೆಯ ದಿನವಾಗಿದೆ.
ನಿಯಮದ ಪ್ರಕಾರ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, ಲಘು ಮೋಟಾರು ವಾಹನ, ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನಗಳು, ಟ್ರ್ಯಾಕ್ಟರ್ ಹಾಗೂ ಪ್ರಯಾಣಿಕರ ಕಾರು ಸೇರಿ ಎಲ್ಲ ಹಳೆಯ ವಾಹನಗಳಿಗೆ ಈ ನಿಯಮ ಅನ್ವಯವಾಗಲಿದೆ. ಇದರ ನೋಂದಣಿಗಾಗಿ transport.karnataka.gov.in ಅಥವಾ www.siam.in ನಲ್ಲಿ ಅವಕಾಶ ಕಲ್ಪಿಸಲಾಗಿದೆ.
ನೋಂದಣಿಯ ವಿಧಾನ:
https://transpot.karnataka.gov.in ಅಥವಾ www.siam.in ಭೇಟಿ ನೀಡಿ, ಬುಕ್ ಎಚ್‌ಎಸ್‌ಆರ್‌ಪಿ ಕ್ಲಿಕ್ ಮಾಡಿ
*ನಿಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಿ
*ವಾಹನದ ಮೂಲ ವಿವರ ಭರ್ತಿ ಮಾಡಿ
*ನಿಮ್ಮ ಅನುಕೂಲಕ್ಕೆ ತಕ್ಕ ಡೀಲರ್ ಸ್ಥಳ ಆಯ್ಕೆ ಮಾಡಬೇಕು
*ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಬೇಕು.
*ಮಾಲೀಕರ ಮೊಬೈಲ್ ಸಂಖ್ಯೆಗೆ ಒಟಿಪಿ ರವಾನಿಸಲಾಗುತ್ತದೆ
*ನಿಮ್ಮ ಅನುಕೂಲಕ್ಕಾಗಿ ಎಚ್‌ಎಸ್‌ಆರ್‌ಪಿ ಅಳವಡಿಕೆಯ ದಿನಾಂಕ, ಸಮಯ, ಸ್ಥಳ ಆಯ್ಕೆ ಮಾಡಬೇಕು. ವಾಹನ ಮಾಲೀಕರ ಕಚೇರಿ ಆವರಣ, ಮನೆಯ ಸಮೀಪದ ಸ್ಥಳವನ್ನು ಎಚ್‌ಎಸ್‌ಆರ್‌ಪಿ ಅಳವಡಿಕೆಗಾಗಿ ಆಯ್ಕೆ ಮಾಡಿಕೊಳ್ಳಬಹುದು. ವಾಹನ ಮಾಲೀಕರು ಎಚ್‌ಎಸ್‌ಆರ್‌ಪಿ ಅಳವಡಿಕೆಗೆ https://transpot.karnataka.gov.in ಅಥವಾ www.siam.in ಮೂಲಕ ಕಾಯ್ದಿರಿಸಿಕೊಳ್ಳಬೇಕು.