ಚಂದ್ರಯಾನ-3 ಯಶಸ್ಸಿಗೆ ದೇಶ- ವಿದೇಶಗಳಲ್ಲಿ ವಿಶೇಷ ಪ್ರಾರ್ಥನೆ

(ನ್ಯೂಸ್ ಕಡಬ) newskadaba.com ಬೆಂಗಳೂರು,ಆ. 23. ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3ರ ನೌಕೆ ಚಂದ್ರನ ಅಂಗಳಕ್ಕೆ ಕಾಲಿಡಲು ಇನ್ನೇನು ಕ್ಷಣಗಣನೆ ಆರಂಭವಾಗಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಚಂದ್ರಯಾನ-3 ಯೋಜನೆ ಯಶಸ್ವಿಯಾಗಿ ಪರಿಪೂರ್ಣಗೊಳ್ಳಲಿ ಎಂದು ದೇಶದಾದ್ಯಂತ ಪ್ರತಿಯೊಬ್ಬ ಭಾರತೀಯರೂ ಶುಭ ಹಾರೈಸುತ್ತಿದ್ದಾರೆ.


ದೇಶದ ಮೂಲೆ ಮೂಲೆಯಲ್ಲೂ ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಾರ್ಥನೆ, ಪೂಜೆ ಪುನಸ್ಕಾರಗಳ ಮೂಲಕ ಚಂದ್ರಯಾನ-3ರ ಯಶಸ್ಸಿಗೆ ಪ್ರಾರ್ಥಿಸಲಾಗುತ್ತಿದ್ದು, ಮಂದಿರ, ಮಸೀದಿ, ಚರ್ಚ್‌ ಎನ್ನದೇ ಸರ್ವಧರ್ಮೀಯರೂ ಶುಭ ಹಾರೈಸುತ್ತಿದ್ದಾರೆ. ಅತ್ತ ವಿದೇಶದಲ್ಲಿರುವ ಭಾರತೀಯರು ಕೂಡ ಚಂದ್ರಯಾನದ ಯಶಸ್ಸಿಗೆ ಪ್ರಾರ್ಥಿಸುತ್ತಿದ್ದಾರೆ. ಚಂದ್ರಯಾನ- 3 ತಂಡದ ಭಾಗವಾಗಿರುವ ಇಸ್ರೋ ವಿಜ್ಞಾನಿ ಸುಧಾಂಶು ಕುಮಾರ್ ಅವರ ಪೋಷಕರು ಬಿಹಾರದ ಗಯಾದಲ್ಲಿರುವ ಮನೆಯಲ್ಲಿ ಚಂದ್ರಯಾನ-3 ಯಶಸ್ವಿ ಲ್ಯಾಂಡಿಂಗ್‌ ಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ ಎನ್ನಲಾಗಿದೆ.

Also Read  ಚಂದ್ರಯಾನ-3 ಕೊನೆಯ ಹಂತದ ಡೀಬೂಸ್ಟಿಂಗ್ ಯಶಸ್ವಿ - ಆ. 23ರಂದು ಲ್ಯಾಂಡಿಂಗ್

error: Content is protected !!
Scroll to Top