ರುಚಿ ರುಚಿಯಾದ ಬ್ರೆಡ್ ರವಾ ರೋಸ್ಟ್..!! – ಮಾಡುವ ವಿಧಾನ

(ನ್ಯೂಸ್ ಕಡಬ)newskadaba.com ಆ.12. ರವೆ ಬೆಳಗಿನ ಉಪಹಾರ ಹಾಗೂ ಕುರುಕಲು ತಿಂಡಿಯನ್ನು ತಯಾರಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ರವೆಯಲ್ಲಿ ವಿಟಮಿನ್ ಎ, ಬಿ, ಸಿ, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಸೋಡಿಯಂ ಗುಣಗಳಿವೆ. ರುಚಿಕರ ಹಾಗೂ ಗರಿಗರಿಯಾದ ಬ್ರೆಡ್ ರವಾ ರೋಸ್ಟ್ ತಯಾರಿಸುವುದು.

ಬೇಕಾಗುವ ಸಾಮಗ್ರಿಗಳು :

ಬ್ರೆಡ್ ಸ್ಲೈಸ್ – 8-10, ರವೆ – 150 ಗ್ರಾಂ, ಮೊಸರು – 100 ಗ್ರಾಂ, ನೀರು – ಅಗತ್ಯಕ್ಕೆ ತಕ್ಕಷ್ಟು, ಕಪ್ಪು ಕಾಳಮೆಣಸು – 1/2 ಟೇಬಲ್ ಚಮಚ, ಉಪ್ಪು – ರುಚಿಗೆ ತಕ್ಕಷ್ಟು, ಸಕ್ಕರೆ – 1 ಟೇಬಲ್ ಚಮಚ, ದೊಡ್ಡ ಗಾತ್ರದ ಈರುಳ್ಳಿ- 1 ಹೆಚ್ಚಿರುವುದು, ದೊಡ್ಡ ಗಾತ್ರದ ಟೊಮ್ಯಾಟೋ – 1 ಹೆಚ್ಚಿರುವುದು, ಹಸಿಮೆಣಸು – ಸ್ವಲ್ಪ, ಕ್ಯಾಪ್ಸಿಕಮ್ – 1/2 ಕಪ್, ಕೊತ್ತಂಬರಿ ಸೊಪ್ಪು – ಅಗತ್ಯಕ್ಕೆ ತಕ್ಕಷ್ಟು, ಬೆಣ್ಣೆ/ತುಪ್ಪ – ಅಗತ್ಯಕ್ಕೆ ತಕ್ಕಷ್ಟು.

Also Read  2 ವರ್ಷಗಳಿಂದ ಅಲ್ಪಸಂಖ್ಯಾತರಿಗೆ ಅನುದಾನ ನೀಡಿಲ್ಲ ➤ ಸಿಎಂ ಬೊಮ್ಮಾಯಿ       

ಮಾಡುವ ವಿಧಾನ :

ಒಂದು ಬೌಲ್ ನಲ್ಲಿ ಮೊಸರು, ಕಪ್ಪು ಕಾಳಮೆಣಸು, ಸೂಜಿ ರವೆ, ಉಪ್ಪು ಮತ್ತು ಸಕ್ಕರೆ ಸೇರಿಸಿ. ಎಲ್ಲವನ್ನೂ ಸೇರಿಸಿ ಮಿಶ್ರಗೊಳಿಸಿ ಹತ್ತು ನಿಮಿಷಗಳ ಕಾಲ ಬಿಡಿ. ಹೆಚ್ಚಿಕೊಂಡ ಈರುಳ್ಳಿ, ಟೊಮ್ಯಾಟೋ, ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು ಎಲ್ಲವನ್ನೂ ಸೇರಿಸಿ ಮಿಶ್ರಗೊಳಿಸಿ.

ಮಿಶ್ರಣವನ್ನು ಬ್ರೆಡ್ ಸ್ಲೈಸ್ ಮೇಲೆ ಹರಡಿ, ದಪ್ಪ ತಳದ ಪಾತ್ರೆಯಲ್ಲಿ ತುಪ್ಪ ಅಥವಾ ಬೆಣ್ಣೆಯನ್ನು ಸೇರಿಸಿ, ಬ್ರೆಡ್ ಸ್ಲೈಸ್ ಅನ್ನು ಎರಡು ಬದಿಯಲ್ಲೂ ಹೊಂಬಣ್ಣ ಬರುವವರೆಗೆ ಹುರಿಯಬೇಕು, ತ್ರಿಭುಜಾಕೃತಿಯಲ್ಲಿ ಕತ್ತರಿಸಿ. ಈಗ ರುಚಿ ರುಚಿಯಾದ ಬ್ರೆಡ್ ರವಾ ರೋಸ್ಟ್ ಸವಿಯಲು ಸಿದ್ಧ.

 

error: Content is protected !!
Scroll to Top