ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಮಗುವಿಗೆ ಜನ್ಮ ನೀಡಿದ ಬೆನ್ನಲ್ಲೇ ಮತ್ತೆ ಅಪ್ತಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ – News Kadaba

ಮಗುವಿಗೆ ಜನ್ಮ ನೀಡಿದ ಬೆನ್ನಲ್ಲೇ ಮತ್ತೆ ಅಪ್ತಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ

(ನ್ಯೂಸ್ ಕಡಬ)newskadaba.com ಜೈಪುರ, ಆ.09. ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳಿಗೆ ಕಡಿವಾಣ ಬೀಳುತ್ತಿಲ್ಲ. ಇದೀಗ ಮತ್ತೊಂದು ಘನ ಘೋರ ಘಟನೆ ವರದಿಯಾಗಿದೆ. ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಕಾಮುಕರು ವಿಚಾರ ಬಾಯ್ಬಿಟ್ಟರೆ ಇಡೀ ಕುಟುಂಬವನ್ನೇ ಹತ್ಯೆ ಮಾಡೋದಾಗಿ ಬೆದರಿಸಿದ್ದಾರೆ. ಹೀಗಾಗಿ ರೇಪ್ ವಿಚಾರ ರಹಸ್ಯವಾಗಿಟ್ಟ ಬಾಲಕಿ ಗರ್ಭಿಣಿಯಾಗಿದ್ದಾಳೆ. ತೀವ್ರ ಹೊಟ್ಟೆ ನೋವಿನ ಕಾರಣ ಪೋಷಕರು ಆಸ್ಪತ್ರೆ ದಾಖಲಿಸಿದ ಬೆನ್ನಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ ಎನ್ನಲಾಗಿದೆ. ಮಗುವಿಗೆ ಜನ್ಮ ನೀಡಿದ ಮರುದಿನ ಮತ್ತೆ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.


ಸರ್ಕಾರಿ ಆಸ್ಪತ್ರೆಗೆ ಬಾಲಕಿಯನ್ನು ಹೊಟ್ಟೆ ನೋವಿನ ಕಾರಣ ದಾಖಲಿಸಲಾಗಿತ್ತು. ತಪಾಸಣೆ ನಡೆಸಿದ ವೈದ್ಯರಿಗೆ ಅಚ್ಚರಿ ಕಾದಿತ್ತು. ಬಾಲಕಿ ಗರ್ಭಿಣಿಯಾಗಿದ್ದು, ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನೂ ಮದುವೆಯಾಗದ ಅಪ್ರಾಪ್ತ ಬಾಲಕಿಯಾದ ಕಾರಣ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಬಾಲಕಿ ಪೋಷಕರು ದೂರು ನೀಡಲು ನಿರಾಕರಿಸಿದ್ದಾರೆ. ಇತ್ತ ಬಾಲಕಿ ಕೂಡ ಆರೋಪಿಗಳ ಹೆಸರು ಹೇಳಲು ಹಿಂದೇಟು ಹಾಕಿದ್ದಾಳೆ. ಆಸ್ಪತ್ರೆ ದಾಖಲಾದ ಕೆಲ ದಿನಗಳಲ್ಲಿ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ. ಎರಡು ದಿನಗಳ ಬಳಿಕ ಬಾಲಕಿ ತಾಯಿ ದಾಖಲೆ ನೋಂದಣಿ, ಔಷದಿ ಸೇರಿದಂತೆ ಇತರ ಕಾರ್ಯಕ್ಕಾಗಿ ಆಸ್ಪತ್ರೆ ಕಚೇರಿಗೆ ತೆರಳಿದ್ದಾರೆ. ಇದೇ ವೇಳೆ ಅಪ್ರಾಪ್ತ ಬಾಲಕಿಯನ್ನು ನೋಡಲು ಬಂದಿರುವ ಆಪ್ತರಂತೆ ನಟಿಸಿದ ಅದೇ ಕಾಮುಕರು ಮತ್ತೆ ಬಾಲಕಿ ಕೋಣೆ ಪ್ರವೇಶಿಸಿದ್ದಾರೆ. ಬಳಿಕ ಮತ್ತೆ ಸಾಮೂಹಿಕ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

Scroll to Top