ಲಿಫ್ಟ್ ನಲ್ಲಿ 3 ದಿನ ಸಿಲುಕಿದ್ದ ಮಹಿಳೆ ಮೃತ್ಯು

(ನ್ಯೂಸ್ ಕಡಬ)newskadaba.com ತಾಷ್ಕೆಂಟ್, ಆ.02. ಬಹುಮಹಡಿ ಕಟ್ಟಡದ ಲಿಪ್ಟ್ ನೊಳಗೆ 3 ದಿನ ಸಿಲುಕಿದ್ದ ಮಹಿಳೆಯೊಬ್ಬರು ಉಸಿರು ಕಟ್ಟಿ ಮೃತಪಟ್ಟ ಘಟನೆ ವರದಿಯಾಗಿದೆ.


ಮಹಿಳೆ ಕಟ್ಟಡದ 9ನೇ ಮಹಡಿಗೆ ಲಿಫ್ಟ್ ಮೂಲಕ ತೆರಳಿದ್ದಾಗ ಲಿಫ್ಟ್ ಹಾಳಾಗಿ ಅದರೊಳಗೆ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ. ವಿದ್ಯುತ್ ಕಡಿತಗೊಂಡ ಕಾರಣ ಲಿಪ್ಟ್ ನಲ್ಲಿನ ಫ್ಯಾನ್ ಕೂಡಾ ಸ್ಥಗಿತಗೊಂಡಿದ್ದು, ಮಹಿಳೆ ಸಹಾಯಕ್ಕಾಗಿ ಎಷ್ಟು ಕಿರುಚಿದರೂ ಯಾರ ಗಮನಕ್ಕೂ ಬಂದಿರಲಿಲ್ಲ ಎಂದು ವರದಿ ತಿಳಿಸಿದೆ.
ತಕ್ಷಣ ಪೊಲೀಸರು ಶೋಧ ಕಾರ್ಯ ನಡೆಸಿದಾಗ ಕೆಟ್ಟುನಿಂತ ಲಿಫ್ಟ್ ನಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ. ತಾಂತ್ರಿಕ ದೋಷ ಈ ದುರಂತಕ್ಕೆ ಕಾರಣವಾಗಿರುವುದು ಪ್ರಾಥಮಿಕ ತನಿಖೆಯಿಂದ ಸ್ಪಷ್ಟವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Scroll to Top