ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆ 100 ರೂ. ಕಡಿತ

(ನ್ಯೂಸ್ ಕಡಬ) newskadaba.com ನವದೆಹಲಿ, ಆ. 01. ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 100 ರೂ.ನಷ್ಟು ಕಡಿತವಾಗಿದೆ. ಮಂಗಳವಾರದಿಂದ ಜಾರಿಗೆ ಬರುವಂತೆ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 99.75 ರೂ. ಇಳಿಕೆಯಾಗಿದೆ.

19 ಕೆಜಿಯ ವಾಣಿಜ್ಯ ಗ್ಯಾಸ್ ಸಿಲಿಂಡರ್ ದರ 99.75 ರೂ. ಕಡಿತವಾಗಿದೆ. ಈ ಹಿನ್ನೆಲೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಮಾರಾಟ ಬೆಲೆ 1,680 ರೂ. ಆಗಿದೆ. ಇನ್ನೂ ಮುಂಬೈನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 1852.50 ರೂ. ಆಗಿದ್ದು, ಕೋಲ್ಕತ್ತಾದಲ್ಲಿ 1820.50 ಹಾಗೂ ಚೆನ್ನೈನಲ್ಲಿ 1852.50 ರೂ. ಆಗಿದೆ.

Scroll to Top