ಚಂದ್ರಯಾನ-3 ಭೂಮಿಯ ಕೊನೆಯ ಕಕ್ಷೆಗೆ ಪ್ರವೇಶ

(ನ್ಯೂಸ್ ಕಡಬ) newskadaba.com ನವದೆಹಲಿ, ಜು. 25. ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಗಗನನೌಕಯು ಇಂದು ಭೂಮಿಯ ಕೊನೆಯ ಕಕ್ಷೆಯನ್ನು ಪ್ರವೇಶಿಸಲಿದೆ. ಮಧ್ಯಾಹ್ನ 2-3 ಗಂಟೆಗೆ 5ನೇ ಅರ್ಥ್‌-bound perigee firing ಪೂರ್ಣಗೊಳ್ಳಲಿದ್ದು ನಂತರ ಜು.31ರ ರಾತ್ರಿ ಭೂಮಿ ಕಕ್ಷೆಯನ್ನು ತೊರೆದು ಚಂದ್ರನ ಕಡೆಗೆ ಚಲಿಸುತ್ತದೆ.

ಪ್ರಸ್ತುತ, ಗಗನನೌಕೆ ಭೂಮಿಯಿಂದ 71,351 ಕಿಮೀ x 233 ಕಿಮೀ ದೂರದ ಕಕ್ಷೆಯಲ್ಲಿದೆ ಎಂದು ಇಸ್ರೋ ಸಂಸ್ಥೆ ಹೇಳಿದೆ. ಬಳಿಕ ಚಂದ್ರನಿಗೆ 5 ಸುತ್ತುಗಳನ್ನು ಹಾಕಿ ಆ. 23ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುತ್ತದೆ. ಇದು ಈ ಕಾರ್ಯಾಚರಣೆಯ ಅತ್ಯಂತ ನಿರ್ಣಾಯಕ ಹಂತವಾಗಿದೆ. ಲ್ಯಾಂಡರ್ ಚಂದ್ರನ ಮೇಲೆ ಮೃದು ಲ್ಯಾಂಡಿಂಗ್ ಮಾಡಿದರೆ, ಭಾರತ ಆ ಸಾಧನೆ ಮಾಡಿದ ಮೊದಲ ದೇಶವಾಗಲಿದೆ.

Also Read  SDPI ದಕ್ಷಿಣ ಕನ್ನಡ ಲೋಕಸಭಾ ಚುನಾವಣೆಯ ಮಹತ್ವದ ಸಭೆ - ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ತೀರ್ಮಾನ

error: Content is protected !!
Scroll to Top