ಚೀನೀ ಮೊಬೈಲ್ ಸಂಸ್ಥೆಗಳಿಂದ 9 ಸಾವಿರ ಕೋಟಿ ರೂಪಾಯಿ ತೆರಿಗೆ ಬಾಕಿ

(ನ್ಯೂಸ್ ಕಡಬ) newskadaba.com ನವದೆಹಲಿ, ಜು. 22. ಓಪ್ಪೋ, ವಿವೋ, ಶಿಯೋಮಿ ಟೆಕ್ನಾಲಜಿ ಸೇರಿದಂತೆ ಚೀನಾ ಸ್ಮಾರ್ಟ್ ಫೋನ್ ಉತ್ಪಾದನಾ ಸಂಸ್ಥೆಗಳು 9 ಸಾವಿರ ಕೋಟಿ ರೂಪಾಯಿ ತೆರಿಗೆ ವಂಚನೆ ಮಾಡಿರುವುದಾಗಿ ಎಲೆಕ್ಟ್ರಾನಿಕ್ಸ್ ಹಾಗೂ ಐಟಿ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಸಂಸತ್ ನಲ್ಲಿ ಹಂಚಿಕೊಂಡಿರುವುದಾಗಿ ವರದಿ ತಿಳಿಸಿದೆ.

ಈ ಚೀನಾ ಸಂಸ್ಥೆಗಳು 2018-19, 2022-23 ರ ಅವಧಿಯಲ್ಲಿ ಕಸ್ಟಮ್ಸ್ ಸುಂಕ, ಜಿಎಸ್ ಟಿ ಸೇರಿದಂತೆ ಒಟ್ಟು 9 ಸಾವಿರ ಕೋಟಿ ರೂ.ಗಳ ತೆರಿಗೆ ವಂಚನೆ ಮಾಡಿವೆ. ಇದರ ಪೈಕಿ ಸರ್ಕಾರ 1,629.87 ಕೋಟಿ ರೂಪಾಯಿಗಳನ್ನು ಮರಳಿ ಪಡೆದಿದೆ ಎಂದೂ ಸಚಿವರು ಮಾಹಿತಿ ನೀಡಿದ್ದಾರೆ.

ಅಂಕಿ-ಅಂಶಗಳ ಪ್ರಕಾರ ಓಪ್ಪೊ ಮೊಬೈಲ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ 5,086 ಕೋಟಿ ರೂಪಾಯಿ ತೆರಿಗೆ ಹಾಗೂ 4,403 ಕೋಟಿ ರೂಪಾಯಿಗಳಷ್ಟು ಕಸ್ಟಮ್ಸ್ ಸುಂಕ ಹಾಗೂ ಜಿಎಸ್ ಟಿ ವಿಭಾಗದಲ್ಲಿ 683 ಕೋಟಿ ರೂಪಾಯಿಗಳನ್ನು ಬಾಕಿ ಉಳಿಸಿಕೊಂಡಿದೆ. ವಿವೋ ಸಂಸ್ಥೆ ಒಟ್ಟಾರೆ, 2,923.25 ಕೋಟಿ ಹಾಗೂ ಶಿಯೋಮಿ 851.14 ಕೋಟಿ ರೂಪಾಯಿ ತೆರಿಗೆ ಪಾವತಿಸಬೇಕಿದೆ. 2019-20 ರ ಅವಧಿಯಲ್ಲಿ ಓಪ್ಪೋ ಮೊಬೈಲ್ ನಿಂದ 450 ಕೋಟಿ ರೂಪಾಯಿಗಳನ್ನು ಪಡೆಯಲಾಗಿದೆ. 2,217 ಕೋಟಿ ರೂಪಾಯಿ ತೆರಿಗೆ ಬಾಕಿ ಹೊಂದಿರುವ ವಿವೋ ಇಂಡಿಯಾದಿಂದ 2020-21 ರಲ್ಲಿ 72 ಕೋಟಿ ರೂಪಾಯಿಗಳನ್ನು ಪಡೆಯಲಾಗಿದೆ. 2019-20 ಶಿಯೋಮಿ ಟೆಕ್ನಾಲಜಿಯಿಂದ 46 ಲಕ್ಷ ರೂಪಾಯಿ ವಾಪಸ್ ಪಡೆಯಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

Also Read  ➤ ಬಂಟ್ವಾಳ 81ರ ವೃದ್ಧನನ್ನು ಅಂಗನವಾಡಿಗೆ ಕಳುಹಿಸಿದ ಹೈಕೋರ್ಟ್

 

error: Content is protected !!
Scroll to Top