ಕಡಬ: ಸಕಲೇಶಪುರ ನಿವಾಸಿ ಕುಮಾರಧಾರಾ ನದಿಗೆ ಹಾರಿರುವ ಶಂಕೆ ➤ ನದಿಯಲ್ಲಿ ಹುಡುಕಾಟ

(ನ್ಯೂಸ್ ಕಡಬ) newskadaba.com ಕಡಬ, ಜೂ.24. ಕೋಡಿಂಬಾಳ ಸಮೀಪದ ನೆಕ್ಕಿಲಾಡಿ ಗ್ರಾಮದ ಕೋರಿಯರ್ ಎಂಬಲ್ಲಿ ಕುಮಾರಾಧಾರ ನದಿಗೆ ವ್ಯಕ್ತಿಯೋರ್ವರು ಜಿಗಿದಿರುವ ಶಂಕೆ ವ್ಯಕ್ತವಾಗಿದೆ.

ರಬ್ಬರ್ ಕಟ್ಟಿಂಗ್ ಕೆಲಸಕ್ಕೆ ಸಕಲೇಶಪುರದಿಂದ ಕೋಡಿಂಬಾಳಕ್ಕೆ ಬಂದಿದ್ದ ಸಕಲೇಶಪುರ ಬಾಲಗದ್ದೆ ನಿವಾಸಿ ಧರ್ಮಯ್ಯ (40) ಎಂಬವರು ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದ್ದು, ನದಿ ಬದಿಯಲ್ಲಿ ಶೂ ಪತ್ತೆಯಾಗಿದೆ. ಕಡಬ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿದ್ದು, ಶೌರ್ಯ ತಂಡದ ಸದಸ್ಯರಿಂದ ನದಿಯಲ್ಲಿ ಹುಡುಕಾಟ ನಡೆಯುತ್ತಿದೆ.

Scroll to Top