KSRTC ಬಸ್ ಡ್ರೈವಿಂಗ್ ಮಾಡುತ್ತಿದ್ದಾಗಲೇ ಡ್ರೈವರ್ ಗೆ ಹೃದಯಾಘಾತ

(ನ್ಯೂಸ್ ಕಡಬ)newskadaba.com ವಿಜಯಪುರ, ಮೇ.31. KSRTC ಬಸ್‌ ಡ್ರೈವಿಂಗ್ ಮಾಡುವಾಗಲೇ ಚಾಲಕನಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದು, ನಿಯಂತ್ರಣ ತಪ್ಪಿದ ಸಾರಿಗೆ ಬಸ್‌ ರಸ್ತೆ ಪಕ್ಕದಲ್ಲಿಯೇ ಇದ್ದ ಪೆಟ್ರೋಲ್‌ ಬಂಕ್‌ಗೆ ನುಗ್ಗಿದ ಘಟನೆ ವಿಜಯಪುರ ಜಿಲ್ಲೆಯ ಸಿಂಧಗಿಯಲ್ಲಿ ನಡೆದಿದೆ.

ಬಸ್ ಓಡಿಸುವಾಗಲೇ ಡ್ರೈವರ್‌ ಮುರಿಗೆಪ್ಪ ಎಂಬವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇದರಿಂದ ಬಸ್‌ ಚಾಲಕನಿಲ್ಲದೇ ನಿಯಂತ್ರಣ ತಪ್ಪಿದ ಬಸ್‌ ಪೆಟ್ರೋಲ್‌ ಬಂಕ್‌ಗೆ ನುಗ್ಗಿದೆ. ಈ ವೇಳೆ ಬಸ್‌ ಕಂಡೆಕ್ಟರ್ ಸಮಯಪ್ರಜ್ಞೆಯಿಂದ ಬಾರಿ ಅನಾಹುತ ತಪ್ಪಿದೆ ಎನ್ನಲಾಗಿದೆ.

 

Scroll to Top