ಕಾಂಗ್ರೆಸ್ ರಾಜ್ಯದಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದೆ.!➤ನಳಿನ್ ಕಮಾರ್ ಕಟೀಲ್

(ನ್ಯೂಸ್ ಕಡಬ)newskadaba.com ಮಂಗಳೂರು,ಮೇ.27 ರಾಜ್ಯದಲ್ಲಿ ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ. ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಅವರ ಪತ್ನಿ ನೂತನ ಕುಮಾರಿ‌ ಅವರಿಗೆ ಈ‌ ಹಿಂದೆ ಬಿಜೆಪಿ ಸರಕಾರ ಅನುಕಂಪದ ಆಧಾರದಲ್ಲಿ ಕೆಲಸ‌ ಕೊಡಿಸಿತ್ತು.‌

ಇದೀಗ ಕಾಂಗ್ರೆಸ್ ಸರಕಾರದ ಅವರನ್ನು ಉದ್ಯೋಗದಿಂದ ಬಿಡುಗಡೆ ಮಾಡಿದೆ.‌ ಕಾಂಗ್ರೆಸ್ ಈ ರೀತಿಯ ದ್ವೇಷ ಸಾಧಿಸದೆ ಅವರಿಗೆ ಮತ್ತೆ ಕೆಲಸ ನೀಡಬೇಕು.ಒಂದು ವೇಳೆ ಕೆಲಸ ನೀಡದಿದ್ದರೆ ಕೇಂದ್ರ ಸರಕಾರ ಸಾಮ್ಯದ ಸಂಸ್ಥೆಗಳನ್ನು ಕೆಲಸ ಕೊಡಿಸುತ್ತೇವೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

 

 

Scroll to Top