ಮತದಾರರಿಗೆ ಹಣ ಹಂಚದೆ ಮೋಸ ಮಾಡಿದ ಆಪ್ತರು.!➤ ಸತ್ಯ ಬಾಯ್ಬಿಟ್ಟ ಕೆ.ಆರ್.ಪೇಟೆ ಅಭ್ಯರ್ಥಿ

(ನ್ಯೂಸ್ ಕಡಬ)newskadaba.com ಮಂಡ್ಯ,ಮೇ.22 ಚುನಾವಣೆಯಲ್ಲಿ ಬೆಂಬಲಿಗರಿಗೆ ಹಣ ಕೊಟ್ಟು ಮಾಜಿ‌ ಸಚಿವರೊಬ್ಬರು ಮೋಸ ಹೋಗಿದ್ದಾರಾ ಎಂಬ ವಿಚಾರ ಅವರ ಮಾತಿನಿಂದಲೇ ಹೊರಬಿದ್ದಿದೆ. ಈ ಮಾಜಿ ಸಚಿವರಿಂದ ಮತದಾರರಿಗೆ ಹಂಚಲು ಪಡೆದಿದ್ದ ಹಣವನ್ನು ಹಂಚದ ಆಪ್ತರೇ ಮೋಸ ಮಾಡಿದ್ದಾರೆ!

ಕೃತಜ್ಞತಾ ಸಭೆಯಲ್ಲಿ ಕೆ.ಆರ್.ಪೇಟೆ ಬಿಜೆಪಿ ಪರಾಜಿತ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ಸತ್ಯ ಬಾಯ್ಬಿಟ್ಟಿದ್ದಾರೆ. ಸೋಲಿನ ಬಳಿಕ ಹಣ ವಾಪಾಸ್ ನೀಡುವಂತೆ ನಾರಾಯಣಗೌಡ ಮನವಿ ಮಾಡಿದ್ದು ‘ಮತದಾರರಿಗೆ ಹಂಚಿಕೆ ಮಾಡದೆ ಇಟ್ಟುಕೊಂಡಿರುವ ಹಣ ವಾಪಸ್ ಕೊಟ್ಟುಬಿಡಿ ಎಂದು ಸಭೆಯಲ್ಲಿ ಅಂಗಲಾಚಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

 

 

 

Scroll to Top