ಮಂಗಳೂರು: ಆನ್‌ಲೈನ್ ವಂಚನೆ ➤ ಲಕ್ಷಾಂತರ ರೂ. ಹಣ ಕಳೆದುಕೊಂಡ ವ್ಯಕ್ತಿ

(ನ್ಯೂಸ್ ಕಡಬ)newskadaba.com ಮಂಗಳೂರು, ಮೇ.22. ಸಾಮಾಜಿಕ‌‌ ಜಾಲತಾಣದಲ್ಲಿ ದಿನಕ್ಕೆ ಒಂದೂವರೆ ಸಾವಿರದಿಂದ ಮೂರುವರೆ ಸಾವಿರ ಹಣ ಗಳಿಸುವ ಪೋಸ್ಟ್ ವೀಕ್ಷಿಸಿದ ವ್ಯಕ್ತಿ ಲಕ್ಷಾಂತರ ರೂ. ಕಳೆದುಕೊಂಡ ಘಟನೆ ಮಂಗಳೂರಿನಲ್ಲಿ‌‌ ನಡೆದಿದೆ.


ದಿನಕ್ಕೆ 1,500 ರೂಪಾಯಿಂದ 3,000 ಸಾವಿರದವರೆಗೆ ಹಣ ಗಳಿಸಬಹುದೆಂಬ ಪೋಸ್ಟ್‌ ಅನ್ನು ಇನ್‌ಸ್ಟಾ ಗ್ರಾಂನಲ್ಲಿ ವೀಕ್ಷಿಸಿದ್ದಾರೆ. ಈ ವ್ಯಕ್ತಿಯನ್ನು ಟೆಲಿಗ್ರಾಂ ಗ್ರೂಪ್‌ಗೆ ಸೇರಿಸಿದ ವಂಚಕರು, ಟಾಸ್ಕ್‌ ಪೂರ್ಣಗೊಳಿಸುವಂತೆ ಸೂಚಿಸಿ, ಟಾಸ್ಕ್ ಮುಗಿದ ಮೇಲೆ ಅವರ ಖಾತೆಯಿಂದ ₹1.81 ಲಕ್ಷ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ . ತನಗೆ ಗೊತ್ತಿಲ್ಲದೆ ಸಂಸ್ಥೆಯೊಂದಕ್ಕೆ ಹಣ ವರ್ಗಾವಣೆಯಾಗಿದೆ ಎಂದು ವಂಚನೆಗೊಳಗಾದ ವ್ಯಕ್ತಿ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Scroll to Top