ದತ್ತು ಪುತ್ರಿಗೆ ಸಿಗರೇಟಿನಿಂದ ಸುಟ್ಟು ಕಿರುಕುಳ ➤ ವೈದ್ಯ ದಂಪತಿಗಳಿಬ್ಬರು ಅರೆಸ್ಟ್



(ನ್ಯೂಸ್ ಕಡಬ)newskadaba.com ಅಸ್ಸಾಂ, ಮೇ.09. ಐದು ವರ್ಷದ ದತ್ತು ಮಗಳನ್ನು ಟೆರೇಸಿನ ಮೇಲೆ ಸುಡು ಬಿಸಿಲಿನಲ್ಲಿ ಕಟ್ಟಿ ಹಾಕಿ ಸಿಗರೇಟಿನಿಂದ ಸುಟ್ಟು ಕಿರುಕುಳ ನೀಡಿದ ವೈದ್ಯ ದಂಪತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.







ಅಸ್ಸಾಂನ ಪ್ರಮುಖ ಮನೋವೈದ್ಯ ಡಾ. ಸಂಗೀತಾ ದತ್ತಾ ಮತ್ತು ಅವರ ಪತಿ ಡಾ. ವಲಿಯುಲ್ ಇಸ್ಲಾಂ ಬಂಧಿತ ಆರೋಪಿಗಳಾಗಿದ್ದಾರೆ ಎಂದು ವರದಿ ತಿಳಿಸಿದೆ.






ಪ್ರಕರಣದಲ್ಲಿ ಡಾ. ವಲಿಯುಲ್ ರನ್ನು ಬಂಧಿಸಿದ್ದರೆ ಆತನ ಪತ್ನಿ ತಲೆಮರೆಸಿಕೊಂಡಿದ್ದ ಸಂಗೀತಾ ಅವರನ್ನು ಮೇಘಾಲಯದ ರಿಬೋದಿಂದ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

 

 

error: Content is protected !!
Scroll to Top