ಮಾವಿನ ಹಣ್ಣಿನ ಪೆಟ್ಟಿಗೆ ಕದ್ದಿದ್ದ ಕೇರಳ ಪೊಲೀಸಪ್ಪ ಸೇವೆಯಿಂದಲೇ ವಜಾ



(ನ್ಯೂಸ್ ಕಡಬ)newskadaba.com ಇಡುಕ್ಕಿ, ಏ.28. ಕಳೆದ ವರ್ಷ ಇಡೀ ಮಾವಿನ ಹಣ್ಣಿನ ಪೆಟ್ಟಿಗೆ ಕದ್ದು ಸಿಕ್ಕಿ ಬಿದ್ದಿದ್ದ ಕೇರಳದ ಪೊಲೀಸ್ ಅಧಿಕಾರಿಯನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ.







ಪೊಲೀಸಪ್ಪನ ಮಾವಿನ ಹಣ್ಣಿನ ಕಳ್ಳತನ ಪ್ರಕರಣ ಭಾರಿ ಸುದ್ದಿ ಮಾಡಿತ್ತು. ಇದು ರಾಜ್ಯ ಪೊಲೀಸ್ ಇಲಾಖೆಗೆ ತೀವ್ರ ಮುಜುಗರ ಉಂಟುಮಾಡಿತ್ತು. ಅಂಗಡಿಯೊಂದರಿಂದ 10 ಕೆಜಿಯಷ್ಟು ತೂಕದ ಮಾವಿನ ಹಣ್ಣುಗಳಿದ್ದ ಪೆಟ್ಟಿಗೆಯನ್ನೇ ಸಿವಿಲ್ ಪೊಲೀಸ್ ಅಧಿಕಾರಿ ಎಗರಿಸಿದ್ದರು. ಅವರನ್ನು ಕಾಯಮ್ಮಾಗಿ ಮನೆಗೆ ಕಳುಹಿಸಿ ಪೊಲೀಸ್ ಇಲಾಖೆ ಬುಧವಾರ ಆದೇಶ ಹೊರಡಿಸಿದೆ.






 

error: Content is protected !!
Scroll to Top