ಆಗಸ್ಟ್ 2ಕ್ಕೆ KEA ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆ ಡ್ರೆಸ್ ಕೋಡ್ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ



(ನ್ಯೂಸ್ ಕಡಬ) newskadaba.com ಜು. 30. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ನಡೆಸಲಾಗುತ್ತಿರುವ ಕರ್ನಾಟಕ ರಾಜ್ಯ ಪೊಲೀಸ್ ನಾಗರಿಕ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ ಪ್ರಮುಖ ವಿವರಗಳು …ಪರೀಕ್ಷಾ ದಿನಾಂಕವು ಆಗಸ್ಟ್ 2, 2026ರಂದು ಹಾಗೂ ಪರೀಕ್ಷಾ ಸಮಯ ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 12:00 ರವರೆಗೆ..ಒಟ್ಟು 4.54 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಈ ಪರೀಕ್ಷೆಗೆ ಬರೆಯಲಿದ್ದಾರೆ. ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಭದ್ರತಾ ತಪಾಸಣೆಗಾಗಿ ನಿಗದಿತ ಸಮಯಕ್ಕಿಂತ ಸಾಕಷ್ಟು ಮುಂಚಿತವಾಗಿಯೇ ಆಗಮಿಸುವುದು ಕಡ್ಡಾಯವಾಗಿದೆ.







ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ತಡೆಯಲು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಕಟ್ಟುನಿಟ್ಟಿನ ಭದ್ರತೆಯನ್ನು ಕೈಗೊಳ್ಳಲಾಗಿದೆ..ಪರೀಕ್ಷಾ ಕೇಂದ್ರದಲ್ಲಿ ಸಿಸಿಟಿವಿ ನಿಗಾ ಜೊತೆಗೆ ಎಐ ಆಧಾರಿತ ಮುಖ ಗುರುತಿಸುವಿಕೆ ವ್ಯವಸ್ಥೆಯ ಮೂಲಕ ಅಭ್ಯರ್ಥಿಗಳ ನೈಜ ಗುರುತನ್ನು ಪರಿಶೀಲಿಸಲಾಗುತ್ತದೆ.






ಕಿವಿ ಭಾಗದಲ್ಲಿ ಬ್ಲೂಟೂತ್, ಇಯರ್‌ಫೋನ್ ಅಥವಾ ಇತರ ಸೂಕ್ಷ್ಮ ಎಲೆಕ್ಟ್ರಾನಿಕ್ ಸಾಧನಗಳನ್ನು ಬಚ್ಚಿಟ್ಟುಕೊಂಡು ಕಾಪಿ ಹೊಡೆಯುವುದನ್ನು ತಡೆಯಲು ಸೂಕ್ಷ್ಮ ಪರೀಕ್ಷಾ ಕೇಂದ್ರಗಳಲ್ಲಿ ENT (ಕಿವಿ, ಮೂಗು, ಗಂಟಲು) ತಜ್ಞ ವೈದ್ಯರನ್ನು ತಪಾಸಣೆಗೆ ನಿಯೋಜಿಸಲಾಗಿದೆ.ಪ್ರಶ್ನೆಪತ್ರಿಕೆಯ ಸಿಲ್ಡ್ ಬಾಕ್ಸ್ ಅನ್ನು ಪರೀಕ್ಷಾ ಕೇಂದ್ರದ ಪ್ರಿನ್ಸಿಪಾಲ್ ಹಾಗೂ ಐದು ಅಭ್ಯರ್ಥಿಗಳ (ವಿದ್ಯಾರ್ಥಿಗಳ) ನೇರ ಸಮಕ್ಷಮದಲ್ಲೇ ತೆರೆಯಲಾಗುತ್ತದೆ.

ಅರ್ಧ ತೋಳಿನ ಉಡುಪುಗಳನ್ನು ಮಾತ್ರ ಧರಿಸಬೇಕು. ಪಾದರಕ್ಷೆಯಾಗಿ ಚಪ್ಪಲಿ ಮಾತ್ರ ಧರಿಸಲು ಅವಕಾಶವಿದೆ.ಉದ್ದ ತೋಳಿನ ಬಟ್ಟೆಗಳು, ಶೂ ,ಕಿವಿ, ತಲೆ ಅಥವಾ ಮುಖವನ್ನು ಮುಚ್ಚುವಂತಹ ಯಾವುದೇ ಉಡುಪುಗಳನ್ನು ಧರಿಸುವಂತಿಲ್ಲ.

ಮಹಿಳಾ ಅಭ್ಯರ್ಥಿಗಳಿಗೆ ಮೂಗುತಿ ಮತ್ತು ಮಂಗಳಸೂತ್ರಕ್ಕೆ ಮಾತ್ರ ವಿನಾಯಿತಿ ನೀಡಲಾಗಿದೆ. ಉಳಿದಂತೆ ಯಾವುದೇ ರೀತಿಯ ಲೋಹದ ಆಭರಣಗಳನ್ನು (ಚೈನು, ಬಳೆ, ಉಂಗುರ ಇತ್ಯಾದಿ) ಧರಿಸುವಂತಿಲ್ಲ.

ಸಂಪೂರ್ಣ ನಿಷೇಧಿತ ವಸ್ತುಗಳು ಪರೀಕ್ಷಾ ಕೊಠಡಿಯೊಳಗೆ ಮೊಬೈಲ್ ಫೋನ್, ಬ್ಲೂಟೂತ್, ಇಯರ್‌ಫೋನ್, ಸ್ಮಾರ್ಟ್ ವಾಚ್, ಕ್ಯಾಲ್ಕುಲೇಟರ್, ಎಲೆಕ್ಟ್ರಾನಿಕ್ ಪೆನ್.ಮತ್ತು ವಾಲೆಟ್, ಹ್ಯಾಂಡ್‌ಬ್ಯಾಗ್, ಗಾಗಲ್ಸ್, ಬೆಲ್ಟ್, ಕ್ಯಾಪ್, ಪುಸ್ತಕಗಳು, ಚೀಟಿಗಳು, ನೀರಿನ ಬಾಟಲಿ ಹಾಗೂ ಆಹಾರ ಪದಾರ್ಥಗಳು.

error: Content is protected !!
Scroll to Top