ನಿಯಂತ್ರಣ ತಪ್ಪಿ ಹೊಂಡಕ್ಕೆ ಉರುಳಿದ ಕಾರು    ➤ ಮೂವರು ಮೃತ್ಯು



(ನ್ಯೂಸ್ ಕಡಬ)newskadaba.com ಕಾಸರಗೋಡು, ಏ.24. ಕಾರು ನಿಯಂತ್ರಣ ತಪ್ಪಿ ಹೊಂಡಕ್ಕೆ ಉರುಳಿದ ಪರಿಣಾಮ ಕಾಸರಗೋಡಿನ ವಿದ್ಯಾರ್ಥಿನಿ ಸೇರಿದಂತೆ ಮೂವರು ಮೃತ ಪಟ್ಟ ಘಟನೆ ವಯನಾಡ್ ಕಲ್ಪಟ್ಟ ಸಮೀಪ ನಡೆದಿದೆ. ಅಪಘಾತದಲ್ಲಿ ಮೂವರು ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.







ಕಾಸರಗೋಡು ವೆಳ್ಳರಿಕಂಡು ವಿನ ಸ್ನೇಹಾ ಜೋಸ್ (20), ಜಿಸ್ನಾ ಮೇರಿ ಜೋಸೆಫ್(20) ಮತ್ತು ಅಡೋನ್ ಬೆಸ್ಟಿ (20) ಮೃತ ಪಟ್ಟವರು ಎಂದು ತಿಳಿದುಬಂದಿದೆ. ಡಿಯೋನಾ ಬೆಸ್ಟಿ, ಸ್ನೇಹಾಲ ಸಹೋದರಿ ಸೋನಾ ಜೋಸೆಫ್ ಮತ್ತು ಸಾಂಜೋ ಜೋಸ್ ಗಾಯಗೊಂಡಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.






error: Content is protected !!
Scroll to Top