ಅಮೃತ್‌ಪಾಲ್‌ ಪತ್ನಿ ಏರ್‌ಪೋರ್ಟ್‌ ನಲ್ಲಿ ಬಂಧನ

(ನ್ಯೂಸ್ ಕಡಬ)newskadaba.com ಅಮೃತಸರ, ಏ.20. ಪರಾರಿಯಾಗಿರುವ ಖಲಿಸ್ತಾನ್ ಪರ ನಾಯಕ ಅಮೃತ್‌ ಪಾಲ್‌ ಪತ್ನಿ ಕಿರಣದೀಪ್ ಕೌರ್‌ ನ್ನು ಅಮೃತಸರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೈಗ್ರೇಷನ್‌ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.


ಕಿರಣ್‌ದೀಪ್ ಪರಾರಿಯಾಗಲು ಬೆಳಗ್ಗೆ 11.30ಕ್ಕೆ ನಿಲ್ದಾಣಕ್ಕೆ ಬಂದಿದ್ದು, ಮಧ್ಯಾಹ್ನ 1:30ಕ್ಕೆ ಲಂಡನ್ ನ ಬರ್ಮಿಂಗ್ ಹ್ಯಾಮ್ ಗೆ ಪ್ರಯಾಣಿಸುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದರು.


ಸದ್ಯ ಆಕೆಯನ್ನು ಸಂಬಂಧಪಟ್ಟ ಅಧಿಕಾರಿಗಳು ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಖಲಿಸ್ತಾನ್ ಬೆಂಬಲಿಗ ಅಮೃತ್‌ಪಾಲ್‌ ಮಾ.18ರಿಂದ ತಲೆಮರೆಸಿಕೊಂಡಿದ್ದು ವಿವಿಧ ರಾಜ್ಯಗಳಲ್ಲಿ ಹುಡುಕಾಟ ನಡೆಸುತ್ತಿದ್ದಾರೆ

Scroll to Top