ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ಷೇರು ಮಾರುಕಟ್ಟೆ..! ➤ಹೂಡಿಕೆದಾರರಿಗೆ ಆಘಾತ!!  

(ನ್ಯೂಸ್ ಕಡಬ)Newskadaba.com ಮುಂಬೈ,ಏ.18 ಒಂಬತ್ತು ದಿನಗಳಿಂದ ಏರುಗತಿಯಲ್ಲಿ ಸಾಗುತ್ತಿದ್ದ ಬಾಂಬೆ ಷೇರು ಪೇಟೆಯ ಸೂಚ್ಯಂಕ ಭಾರೀ ಪ್ರಮಾಣದಲ್ಲಿ ಕುಸಿತ ಅನುಭವಿಸಿದೆ.

ವಿಶೇಷವಾಗಿ ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೋಸಿಸ್‌ ಸಹಿತ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಂಪೆನಿಗಳ, ತಂತ್ರಜ್ಞಾನ ಮತ್ತು ದೂರಸಂಪರ್ಕ ಕಂಪೆನಿಗಳ ಷೇರುಗಳು ಭಾರಿ ಪ್ರಮಾಣದಲ್ಲಿ ಇಳಿಕೆ ಕಂಡಿವೆ.

ಬಿಎಸ್‌ಇ ಸೂಚ್ಯಂಕ ಮಧ್ಯಂತರದಲ್ಲಿ 988.53 ಪಾಯಿಂಟ್ಸ್‌ ಇಳಿಕೆಯಾಗಿತ್ತು. ಆದರೆ ದಿನಾಂತ್ಯಕ್ಕೆ 520.25 ಪಾಯಿಂಟ್ಸ್‌ಗಳಿಗೆ ಮುಕ್ತಾಯವಾಗಿ, 59,910.75ರಲ್ಲಿ ಸೂಚ್ಯಂಕ ಮುಕ್ತಾಯವಾಯಿತು.

 

 

Scroll to Top