ವಾಟ್ಸಪ್ ನಲ್ಲಿ ಚಾಟ್ ಮಾಡಿ ಬೆದರಿಕೆ ಹಾಕಿ ಧನ್ಯಶ್ರೀ ಆತ್ಮಹತ್ಯೆಗೆ ಪ್ರೇರಣೆ ► ಪ್ರಮುಖ ಆರೋಪಿ ಬಂಟ್ವಾಳ ನಿವಾಸಿ ಬಂಧನ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಜ.11. ಮೂಡಿಗೆರೆ ಕಾಲೇಜು ವಿದ್ಯಾರ್ಥಿನಿ ಧನ್ಯಶ್ರೀಗೆ ವಾಟ್ಸಪ್ ಮೂಲಕ ಚಾಟ್ ಮಾಡಿ ಬೆದರಿಕೆ ಹಾಕಿದ್ದಲ್ಲದೆ, ಸ್ಕ್ರೀನ್ ಶಾಟ್‍ಗಳನ್ನು ತೆಗೆದು ಸಂಘಟನೆಗಳಿಗೆ ನೀಡಿ ಧನ್ಯಶ್ರೀ ಆತ್ಮಹತ್ಯೆಗೆ ಪ್ರೇರೇಪಣೆ ನೀಡಿದ ಪ್ರಮುಖ ಆರೋಪಿಯನ್ನು ಚಿಕ್ಕಮಗಳೂರು ಪೊಲೀಸರು ಬಂಧಿಸಿದ ಘಟನೆ ಗುರುವಾರದಂದು ನಡೆದಿದೆ.

ಬಂಧಿತ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಡಗ ಕಜೇಕಾರ್ ನಿವಾಸಿ ರಾಜೇಶ್ ಎಂಬವರ ಪುತ್ರ ಸಂತೋಷ್(20) ಎಂದು ಗುರುತಿಸಲಾಗಿದೆ. ಲಿಫ್ಟ್ ಮೆಕ್ಯಾನಿಕ್ ವೃತ್ತಿ ನಿರ್ವಹಿಸುತ್ತಿದ್ದ ಈತ ಧನ್ಯಶ್ರೀ ಆತ್ಮಹತ್ಯೆಯ ನಂತರ ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದ.

Scroll to Top