ಬಾಂಬ್ ತಯಾರಿಸುವ ವೇಳೆ ಸ್ಪೋಟಗೊಂಡು ಕೈಗಳನ್ನು ಕಳೆದು ಕೊಂಡ ಯುವಕ

(ನ್ಯೂಸ್ ಕಡಬ)newskadaba.com ತಲಸ್ಸೆರಿ, ಏ.13. ಬಾಂಬ್ ತಯಾರಿಸುತ್ತಿದ್ದಾಗ ಸಂಭವಿಸಿದ ಸ್ಫೋಟದಲ್ಲಿ ಯುವಕ ತನ್ನ ಒಂದು ಕೈಯನ್ನು ಕಳೆದುಕೊಂಡಿದ್ದಾನೆ ಮತ್ತು ಇನ್ನೊಂದು ಕೈಗೆ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


ಇಲ್ಲಿನ ತಲಸ್ಸೆರಿಯ ಎರಂಜೋಲಿಪಾಲಂ ಬಳಿ ಈ ಘಟನೆ ನಡೆದಿದೆ. ಬಾಂಬ್ ನಿರ್ಮಾಣದ ವೇಳೆ ಸ್ಫೋಟ ಸಂಭವಿಸಿದ್ದು, ಸ್ಫೋಟಕ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Scroll to Top