ಆಲಿಕಲ್ಲು ಮಳೆ- ಇಂಡಿಗೋ ವಿಮಾನಕ್ಕೆ ಹಾನಿ

(ನ್ಯೂಸ್ ಕಡಬ) newskadaba.com ಹೈದರಾಬಾದ್‌, ಮಾ. 21. ಅಹಮದಾಬಾದ್‌ನಿಂದ ಹೈದರಾಬಾದ್‌ಗೆ ಬಂದ ಇಂಡಿಗೋ ವಿಮಾನವು ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ಆಲಿಕಲ್ಲು ಮಳೆಗೆ ಸಿಲುಕಿ ಹಾನಿಗೊಂಡ ಘಟನೆ ವರದಿಯಾಗಿದೆ.

ಘಟನೆಯಲ್ಲಿ ಯಾವುದೇ ಪ್ರಾಣಹಾಣಿ ಸಂಭವಿಸಿಲ್ಲ. ವಿಮಾನಕ್ಕೆ ಹಾನಿಯಾಗಿರುವ ಛಾಯಾಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಆಲಿಕಲ್ಲು ಮಳೆಗೆ ವಿಮಾನದ ರೇಡೋಮ್ ಮತ್ತು ವಿಂಡ್‌ ಶೀಲ್ಡ್‌ ಗಳು ಹಾನಿಗೊಳಗಾಗಿರುವ ಕುರಿತು ತಿಳಿದುಬಂದಿದೆ.

Scroll to Top