➤ ಉಪ್ಪಿನಂಗಡಿ ಕಾಲು ಜಾರಿ ನದಿಗೆ ಬಿದ್ದು ಬಾಲಕ ಮೃತ್ಯು..!

(ನ್ಯೂಸ್ ಕಡಬ) newskadaba.com. ಉಪ್ಪಿನಂಗಡಿ.  ಮಾ. 13. ಉಪ್ಪಿನಂಗಡಿ ನದಿಯಲ್ಲಿ ಸ್ನಾನ ಮಾಡಲೆಂದು ನೀರಿಗಿಳಿದ ಬಾಲಕನೋರ್ವ ಕಾಲು ಜಾರಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತ ಬಾಲಕನನ್ನು ಬಂಟ್ವಾಳ ತಾಲೂಕಿನ ಮಾಣಿ ನಿವಾಸಿ ಮಹಮ್ಮದ್ ತಾಹಿರ್ ಅವರ ಮಗ ಮಹಮ್ಮದ್ ಸಲ್ಮಾನ್(16) ಎಂದು ಗುರುತಿಸಲಾಗಿದೆ. ಈತ ಹತ್ತನೆ ತರಗತಿಯಲ್ಲಿ ಓದುತ್ತಿದ್ದು, ಸಂಬಂಧಿ ಬಾಲಕ ಮಹಮ್ಮದ್ ಇರ್ಫಾನ್  ಜತೆಯಲ್ಲಿ ಪೆರ್ನೆಯಲ್ಲಿನ ತನ್ನ ಚಿಕ್ಕಮ್ಮನ ಮನೆಗೆ ಬಂದಿದ್ದು, ನದಿಯಲ್ಲಿ ಸ್ನಾನ ಮಾಡುವ ವೇಳೆ ಕಾಲು ಜಾರಿ ನೀರಿಗೆ ಬಿದ್ದು, ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

Scroll to Top