ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
➤ ನರ್ಸ್ ವೇಷ ಧರಿಸಿ ಮಗುವನ್ನು ಅಪಹರಿಸಿದ ಮಹಿಳೆ – News Kadaba

➤ ನರ್ಸ್ ವೇಷ ಧರಿಸಿ ಮಗುವನ್ನು ಅಪಹರಿಸಿದ ಮಹಿಳೆ

(ನ್ಯೂಸ್ ಕಡಬ) newskadaba.com. ಹಾವೇರಿ. ಮಾ. 13. ನರ್ಸ್ ವೇಷ ಧರಿಸಿದ್ದ ಮಹಿಳೆಯೊಬ್ಬರು ಜಿಲ್ಲೆಯ ಆಸ್ಪತ್ರೆಯೊಂದರಿಂದ ಎರಡು ದಿನದ ಮಗುವನ್ನು ಕದ್ದೊಯ್ದಿರುವ ಘಟನೆ ನಡೆದಿದೆ.  ನವಜಾತ ಶಿಶುವಿಗೆ ಲಸಿಕೆ ಹಾಕಲು ಬಂದಿರುವುದಾಗಿ ಹೇಳುವ ಮೂಲಕ ಆರೋಪಿ ಮಹಿಳೆ ನರ್ಸ್ ವೇಷದಲ್ಲಿ ಆಸ್ಪತ್ರೆಯ ಹೆರಿಗೆ ವಾರ್ಡ್‌ಗೆ ಪ್ರವೇಶಿಸಿದ್ದಾಳೆ. ಇದನ್ನು ತಿಳಿಯದ ಕುಟುಂಬಸ್ಥರು ಆಕೆಗೆ ಮಗುವನ್ನು ಒಪ್ಪಿಸಿದ್ದಾರೆ. ಆರೋಪಿ ವಾಪಸ್ ಬಾರದೆ ಇದ್ದಾಗ ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದಾರೆ.

ಕೂಡಲೇ ಹಾವೇರಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿ ಪತ್ತೆಗೆ ಪೊಲೀಸರಿಗೆ ಸುಲಭವಾಗಿದೆ. ಮದುವೆಯಾಗಿ ಐದು ವರ್ಷವಾದರೂ ಮಗುವಾಗದ ಕಾರಣ ಮಗುವನ್ನು ಕದ್ದಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾರೆ.

ಆರೋಪಿ ಮಹಿಳೆ ಬೆಂಗಳೂರಿನ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಆಕೆ ತನ್ನ ಹಳೆಯ ಸಮವಸ್ತ್ರವನ್ನು ಧರಿಸಿ ಆಸ್ಪತ್ರೆಯನ್ನು ಪ್ರವೇಶಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಮತ್ತು ಬಟ್ಟೆಗಳ ಬಣ್ಣವನ್ನು ಆಧರಿಸಿ ಮಗುವನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Scroll to Top