➤ಇನ್ ಸ್ಟಾಗ್ರಾಮ್ ರೀಲ್ಸ್ ➤ಕಾಲು ಜಾರಿ ಬಿದ್ದು ಯುವಕ ಮೃತ್ಯು..!

(ನ್ಯೂಸ್ ಕಡಬ) newskadaba.com. ಪುಣೆ. 13. ಇನ್ಸ್ ಸ್ಟಾಗ್ರಾಮ್ ರೀಲ್ಸ್ ಮಾಡುವ ಹವ್ಯಾಸವು ಯುವಕನೊಬ್ಬನ ಪ್ರಾಣಕ್ಕೆ ಕಂಟಕ ವಾಗಿದೆ. ಇನ್ ಸ್ಟಾಗ್ರಾಮ್ ರೀಲ್ಸ್ ಮಾಡುವಾಗ ಅಣೆಕಟ್ಟಿನಿಂದ ಕಾಲು ಜಾರಿ ಬಿದ್ದು, ಯುವಕನೊರ್ವ ಮೃತಪಟ್ಟ ಘಟನೆ ಪುಣೆಯಲ್ಲಿ ನಡೆದಿದೆ. ಮೃತ ಯುವಕನನ್ನು  ದತ್ತ ಭಾರತಿ(24) ಎಂದು ಗುರುತಿಸಲಾಗಿದೆ.

ದತ್ತ ಭಾರತಿ, ಪುಣೆ ಜಿಲ್ಲೆಯ ಖೇಡ್ ನಲ್ಲಿರುವ ಭಾಮಾ ಆಸ್ಖೇಡ್  ಡ್ಯಾಮ್ ಗೆ ಇನ್ ಸ್ಟಾಗ್ರಾಮ್ ರೀಲ್ಸ್ ಮಾಡಲು ಹೋಗಿದ್ದ  ಈ ವೇಳೆ  ಅಣೆಕಟ್ಟಿನಿಂದ ಕಾಲು ಜಾರಿ ಬಿದ್ದು ಮೃತ ಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

Scroll to Top