10ನೇ ತರಗತಿ ವಿದ್ಯಾರ್ಥಿ ಜೊತೆ ಶಿಕ್ಷಕಿ ಪರಾರಿ      ➤  ಪ್ರಕರಣ ದಾಖಲು.!

(ನ್ಯೂಸ್ ಕಡಬ)newskadaba.com ಹೈದರಾಬಾದ್, ಮಾ.07. ಶಾಲಾ ಬಾಲಕನೊಂದಿಗೆ ಶಿಕ್ಷಕಿ ಪರಾರಿಯಾದ ಘಟ‌ನೆ ಚಂದಾನಗರದಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಫೆ.16 ರಂದು 26 ವರ್ಷದ ಶಿಕ್ಷಕಿ ಹಾಗೂ 10ನೇ ತರಗತಿ ವಿದ್ಯಾರ್ಥಿ ಇಬ್ಬರೂ ನಾಪತ್ತೆಯಾಗಿದ್ದರು. ತನಿಖೆ ವೇಳೆ ವಿದ್ಯಾರ್ಥಿ ಜೊತೆಗಿನ ಶಿಕ್ಷಕಿಯ ಪ್ರೇಮ ಪ್ರಕರಣ ಬಯಲಾಗಿದೆ.

ಈ ಬಗ್ಗೆ ಬಾಲಕನ ಪೋಷಕರು ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಕೇಸ್ ದಾಖಲಿಸಿದ್ದಾರೆ. ಶಿಕ್ಷಕಿಯ ಅಜ್ಜಿ ಚಂದಾನಗರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ‌.

 

 

Scroll to Top