ಐದು ತಿಂಗಳ ಮಗುವಿನ ಕೈ ಕಾಲು ಮುರಿದ ತಂದೆ       ➤  ಆರೋಪಿ ಪತ್ರಕರ್ತ ಅಂದರ್​



(ನ್ಯೂಸ್ ಕಡಬ)newskadaba.com  ಗುವಾಹಟಿ, ಮಾ.06. ಸ್ವತ: ತಂದೆಯೇ ತನ್ನ ಐದು ತಿಂಗಳ ಮಗನ ಕೈಕಾಲುಗಳನ್ನು ಮುರಿದು ಗಾಯಗೊಳಿಸಿರುವ ಅಘಾತಕಾರಿ ಮತ್ತು ಹೃದಯ ವಿದ್ರಾವಕ ಘಟನೆ ಗುವಾಹಟಿ ಸಿಟಿಯ ಕಾಹಿಲಿಪರ್​ನ ಪತ್ರಕರ್ತರ ವಸಾಹತು ಕಾಲೊನಿಯಲ್ಲಿ ನಡೆದಿದೆ.







ತೀವ್ರ ಗಾಯಗೊಂಡಿದ್ದ ಮಗುವನ್ನು ಪ್ರಸ್ತುತ ಗುವಾಹಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗುವಿಗೆ ಯಾಕೆ ಚಿತ್ರಹಿಂಸೆ ನೀಡಲಾಗಿದೆ ಎನ್ನುವುದು ಇನ್ನೂ ತಿಳಿದುಬಂದಿಲ್ಲ.






ಕ್ರೌರ್ಯ ಮೆರೆದ ಆರೋಪಿ ತಂದೆಯನ್ನು ಅಲ್ಕೇಶ್ ಗೋಸ್ವಾಮಿ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಭಗದತ್ತಾಪುರ ಠಾಣೆಯ ಪೊಲೀಸರು ಬಂಧಿಸಿ, ವಶಕ್ಕೆ ಪಡೆದಿದ್ದಾರೆ. ಆರೋಪಿ ಗುರುವಾರ ಮಗುವಿನ ಮೇಲೆ ಹಲ್ಲೆ ನಡೆಸಿದ್ದನು ಎನ್ನಲಾಗಿದೆ.

 

 

error: Content is protected !!
Scroll to Top