ಒಂದೇ ಬೈಕ್‌ ನಲ್ಲಿ 6 ಮಂದಿ ತೆರಳುತ್ತಿದ್ದಾಗ ಢಿಕ್ಕಿ ಹೊಡೆದ ಟೆಂಪೋ !       ➤ ನಾಲ್ವರು ದುರ್ಮರಣ

(ನ್ಯೂಸ್ ಕಡಬ)newskadaba.com ಮಹಾರಾಷ್ಟ್ರ, ಮಾ.06. ಟೆಂಪೋ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಲಾತೂರ್‌ನಲ್ಲಿ ನಡೆದಿದೆ.

ಎಲ್ಲಾ ಆರು ಜನರು ಒಂದೇ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ, ಎದುರಿನಿಂದ ವೇಗವಾಗಿ ಬಂದ ಟೆಂಪೋ ಬೈಕ್‌ ಗೆ ಡಿಕ್ಕಿ ಹೊಡೆದಿದೆ. ಅಪಘಾತದ ವೇಳೆ ಟೆಂಪೋ ಕೂಡ ಪಲ್ಟಿಯಾಗಿದ್ದು, ಒಂಬತ್ತು ಕುರಿಗಳು ಸಾವನ್ನಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

Scroll to Top