ಬಿಳಿನೆಲೆ: ಬೈಕ್-ಕಾರು ಢಿಕ್ಕಿ ► ಬೈಕ್ ಸವಾರ ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಡಿ.29. ಬೈಕ್ ಹಾಗೂ ಝೈಲೋ ಕಾರು ನಡುವೆ ಢಿಕ್ಕಿ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಿಳಿನೆಲೆ CPCRI ಬಳಿ ಶುಕ್ರವಾರದಂದು ನಡೆದಿದೆ.

ಘಟನೆಯಲ್ಲಿ ಬೈಕ್ ಸವಾರ ಸುಬ್ರಹ್ಮಣ್ಯ ಕಾಲೇಜು ವಿದ್ಯಾರ್ಥಿ ಮರ್ಧಾಳ ನಿವಾಸಿ ನವೀನ್ ಗಂಭೀರ ಗಾಯಗೊಂಡಿದ್ದು, ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Scroll to Top