ನ್ಯೂಸ್ ಕಡಬ) newskadaba.com. ಬೆಂಗಳೂರು. ಫೆ.13. ಬೇಸ್ ಟ್ರಾನ್ಸೀವರ್ ಸ್ಟೇಷನ್‌ಗಳಲ್ಲಿ (ಬಿಟಿಎಸ್) ಅನುಮತಿ ನೀಡಿದ್ದಕ್ಕಿಂತ ಹೆಚ್ಚು ವಿದ್ಯುತ್ಕಾಂತೀಯ ವಿಕಿರಣ ಹೊರಸೂಸುತ್ತಿರುವ ಹಿನ್ನೆಲೆಯಲ್ಲಿ ನಗರದ 10 ಮೊಬೈಲ್ ಕಂಪನಿಗಳಿಗೆ ಕೇಂದ್ರ ಸರಕಾರ ದಂಡ ವಿಧಿಸಿದೆ.
10 ಮೊಬೈಲ್ ಕಂಪೆನಿಗಳಿಗೆ ದಂಡ ವಿಧಿಸಿರುವುದನ್ನು ಕೇಂದ್ರ ಸರಧಿಕಾರ ಒಪ್ಪಿಕೊಂಡಿದ್ದು, ಒಟ್ಟು 4.45 ಕೋಟಿ ರೂ. ದಂಡ ಸಂಗ್ರಹಿಸಲಾಗಿದೆ ಎಂದು ವಿವರ ನೀಡಿದೆ.
ಇತ್ತೀಚಿನ ಮಾಹಿತಿ ಪ್ರಕಾರ, ದೇಶಾದ್ಯಂತ ದೂರಸಂಪರ್ಕ ಇಲಾಖೆಯ ಪರವಾನಗಿ ಪಡೆದ ಸೇವಾ ಪ್ರದೇಶದ (ಎಲ್‌ಎಸ್‌ಎ) 11,61,281 ಬಿಟಿಎಸ್‌ಗಳ ವಿದ್ಯುತ್ಕಾಂತೀಯ ವಿಕಿರಣ (ಇಎಂಎಫ್) ಮಾನದಂಡಗಳ ಅನುಸರಣೆ ಪರೀಕ್ಷಿಸಲಾಯಿತು. ಇದರಲ್ಲಿ ಬೆಂಗಳೂರಿನ 10 ಸೇರಿದಂತೆ ಒಟ್ಟು ದೇಶದ 320 ಬಿಟಿಎಸ್ ನಿಗದಿತ ಇಎಂಎಫ್ ಮಿತಿ ಮೀರಿರುವುದು ಕಂಡು ಬಂದಿದೆ.