ಅಂಬೇಡ್ಕರ್ ಬಗ್ಗೆ ಅವಹೇಳನಾಕಾರಿಯಾಗಿ ಹೇಳಿಕೆ ! ➤ ಆರೋಪಿ ಅರೆಸ್ಟ್

(ನ್ಯೂಸ್ ಕಡಬ)newskadaba.com ಹೈದರಾಬಾದ್, ಫೆ.12. ತೆಲಂಗಾಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ ಅವರ ಬಗ್ಗೆ ಹೇಳಿಕೆ ಕೊಟ್ಟ ಆರೋಪಿಯನ್ನು ಬಂಧಿಸಲಾಗಿದೆ.

ಅಂಬೇಡ್ಕರ್ ಈಗ ಜೀವಂತವಾಗಿ ಇದ್ದಿದ್ದರೆ ಅವರನ್ನು ನಾನು ಕೊಲ್ಲುತ್ತಿದ್ದೆ ಎಂದು ಹಮಾರಾ ಪ್ರಸಾದ್ ಎಂಬಾತ ಅಂಬೇಡ್ಕರ್‌ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ವಿಡಿಯೋ ವೈರಲ್‌ ಆದ ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಡಾ.ಬಿ.ಆರ್.ಅಂಬೇಡ್ಕರ್‌ ಅವರು ಬರೆದ ಪುಸ್ತಕವೊಂದನ್ನು ಹಿಡಿದುಕೊಂಡು ಹಮಾರಾ ಪ್ರಸಾದ್ ಗಾಂಧೀಜಿಯನ್ನು ಗೋಡ್ಸೆ ಕೊಂದಂತೆ, ಒಂದು ವೇಳೆ ಅಂಬೇಡ್ಕರ್‌ ಈಗ ಜೀವಂತವಾಗಿ ಇದ್ದಿದ್ದರೆ ಅವರನ್ನು ನಾನು ಕೊಲ್ಲುತ್ತಿದ್ದೆ ಎಂದು ವಿಡಿಯೋ ಮೂಲಕ ಹೇಳಿದ್ದ ಎನ್ನಲಾಗಿದೆ.

 

 

Scroll to Top