ಬ್ಯಾಂಕ್ ಲಾಕರ್ ನಲ್ಲಿಟ್ಟ ಲಕ್ಷ ಲಕ್ಷ ಹಣವನ್ನು ತಿಂದು ಹಾಕಿದ ಗೆದ್ದಲು !                 

(ನ್ಯೂಸ್ ಕಡಬ)newskadaba.com ರಾಜಸ್ತಾನ, ಫೆ.12. ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ನೋಟುಗಳು ಮತ್ತು ಆಸ್ತಿ ದಾಖಲೆಗಳನ್ನು ಗೆದ್ದಲು ಹುಳುಗಳು ತಿಂದು ಹಾಕಿರುವ ಘಟನೆ ರಾಜಸ್ತಾನದಲ್ಲಿ ವರದಿಯಾಗಿದೆ.

ಬ್ಯಾಂಕ್ ವೊಂದರಲ್ಲಿ ಲಾಕರ್ ನಲ್ಲಿಟ್ಟಿದ್ದ ಮಹಿಳೆಯೊಬ್ಬರ ಲಕ್ಷ ಲಕ್ಷ ರೂಪಾಯಿ ನೋಟುಗಳು ಹಾಗೂ ಆಸ್ತಿ ದಾಖಲೆಗಳನ್ನು ಗೆದ್ದಲು ತಿಂದು ಹಾಕಿವೆ. ಲಾಕರ್ ನಲ್ಲಿಟ್ಟಿದ್ದ ಎರಡು ಲಕ್ಷ ಹದಿನೈದು ಸಾವಿರ ರೂಪಾಯಿ ಮೌಲ್ಯದ ನೋಟುಗಳನ್ನು ಗೆದ್ದಲು ತಿಂದು ಹಾಕಿದೆ ಎನ್ನಲಾಗಿದೆ. ಬ್ಯಾಂಕ್ ಲಾಕರ್ ಸಂಖ್ಯೆ 265 ರ ಮಾಲೀಕರಾದ ಸುನೀತಾ ಮೆಹ್ತಾ ಅವರು ತಮ್ಮ ಲಾಕರ್‌ನಲ್ಲಿದ್ದ ಹಣವನ್ನು ಹಿಂಪಡೆಯಲು ಹೋದಾಗ ಪ್ರಕರಣ ಬಯಲಾಗಿದೆ‌.

Scroll to Top