ಮಹಾರಾಷ್ಟ್ರ ಸರ್ಕಾರಿ ಬಸ್‌ ಕಳವು ಮಾಡಿ ಕರ್ನಾಟಕದಲ್ಲಿ ನಿಲ್ಲಿಸಿ ಪರಾರಿ

(ನ್ಯೂಸ್ ಕಡಬ)newskadaba.com ಲಾತೂರ್‌, ಫೆ.03. ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಬಸ್ಸೊಂದನ್ನು ಅನಾಮಿಕರು ಕಳವು ಮಾಡಿ ಕರ್ನಾಟಕದಲ್ಲಿ ನಿಲ್ಲಿಸಿ ಪರಾರಿ ಆಗಿರುವ ಘಟನೆ ವರದಿಯಾಗಿದೆ.

ಮಹಾರಾಷ್ಟ್ರದ ಲಾತೂರು ಬಳಿಕ ಔರಾದ ಶಹಾಜಾನಿ ನಿಲ್ದಾಣದಿಂದ ನಿಲ್ಲಿಸಲಾಗಿದ್ದ ಬಸ್ಸು ಇದ್ದಕ್ಕಿದ್ದಂತೆ ನಾಪತ್ತೆ ಆಗಿತ್ತು. ಬಳಿಕ ಈ ಬಸ್ಸು 14 ಕಿ.ಮೀ. ದೂರದ ಕರ್ನಾಟಕದ ಕೇಸರ್‌ ಜವಳಗಾ ಗ್ರಾಮದ ಬಳಿ ಪತ್ತೆ ಆಗಿದೆ. ಯಾರೋ ಅಪರಿಚಿತ ವ್ಯಕ್ತಿ ಇದನ್ನು ಚಲಾಯಿಸಿಕೊಂಡು ಬಂದು, ಜವಳಗಾ ಗ್ರಾಮದಲ್ಲಿ ನಿಲ್ಲಿಸಿ ಹೋಗಿದ್ದಾನೆ. ಯಾರು ಇದನ್ನು ಮಾಡಿದ್ದು, ಏಕೆ ಮಾಡಿದ್ದು, ಎಂಬ ಬಗ್ಗೆ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ.

Scroll to Top