ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಮಹಿಳೆಯರಿಗೆ ಗುಡ್ ನ್ಯೂಸ್ ➤ ಉದ್ಯಮ ಆರಂಭಿಸಲು ಸಿಗುತ್ತೆ 3 ಲಕ್ಷ ಬಡ್ಡಿ ರಹಿತ ಸಾಲ – News Kadaba

ಮಹಿಳೆಯರಿಗೆ ಗುಡ್ ನ್ಯೂಸ್ ➤ ಉದ್ಯಮ ಆರಂಭಿಸಲು ಸಿಗುತ್ತೆ 3 ಲಕ್ಷ ಬಡ್ಡಿ ರಹಿತ ಸಾಲ

(ನ್ಯೂಸ್ ಕಡಬ) newskadaba.com, ಬೆಂಗಳೂರು, ಫೆ.2. ಮಹಿಳೆಯರಲ್ಲಿ ಉದ್ಯಮಶೀಲತೆ ಹೆಚ್ಚಿಸಲು, ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಮತ್ತು ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರದ ಮಹಿಳಾ ಅಭಿವೃದ್ಧಿ ನಿಗಮ ಜಾರಿಗೆ ತಂದಿರುವ ಯೋಜನೆ ಇದಾಗಿದೆ. ಈ ಯೋಜನೆಯಡಿ ಸಾಲ ಪಡೆಯಲು ಅರ್ಹತೆ ಏನು, ಅರ್ಜಿ ಸಲ್ಲಿಸುವುದು ಹೇಗೆ? ಇತ್ಯಾದಿ ಮಾಹಿತಿ ಇಲ್ಲಿದೆ.

ಉದ್ಯೋಗಿನಿ ಯೋಜನೆ ಎಂದರೇನು?

ದೇಶದ ಒಟ್ಟಾರೆ ಆರ್ಥಿಕ ಬೆಳವಣಿಗೆಗಾಗಿ ಸಣ್ಣ ಉದ್ಯಮಗಳ ಸ್ಥಾಪನೆಗೆ ಪ್ರೋತ್ಸಾಹ ನೀಡುವುದಕ್ಕಾಗಿ ಕೇಂದ್ರ ಸರ್ಕಾರದ ಮಹಿಳಾ ಅಭಿವೃದ್ಧಿ ನಿಗಮ ಜಾರಿಗೆ ತಂದಿರುವ ಯೋಜನೆ ಇದಾಗಿದೆ. ಮುಖ್ಯವಾಗಿ ಮಹಿಳೆಯರ ಸಬಲೀಕರಣವನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ಜಾರಿಗೊಳಿಸಲಾಗಿದೆ. ಸಣ್ಣ ಉದ್ಯಮ ಆರಂಭಿಸಲು ಬಂಡವಾಳಕ್ಕಾಗಿ ಈ ಯೋಜನೆಯಡಿ ಮಹಿಳೆಯರಿಗೆ 3 ಲಕ್ಷ ರೂ.ವರೆಗೆ ಬಡ್ಡಿರಹಿತ ಸಾಲ ನೀಡಲಾಗುತ್ತದೆ.

ಉದ್ಯೋಗಿನಿ ಯೋಜನೆ ಲಕ್ಷಣಗಳೇನು?

ಉದ್ಯೋಗಿನಿ ಯೋಜನೆಯಡಿ ಸಮಾಜದ ಎಲ್ಲ ವರ್ಗಗಳ ಮಹಿಳೆಯರಿಗೆ ಬಡ್ಡಿರಹಿತ ಸಾಲ ನೀಡಲಾಗುತ್ತದೆ. ವಿಧವೆಯರು, ಅಂಗವಿಕಲರು, ನಿರ್ಗತಿಕ ಮಹಿಳೆಯರಿಗೆ ವಿಶೇಷ ಪ್ರಾತಿನಿಧ್ಯ ನೀಡಲಾಗುತ್ತದೆ.

ಯಾವೆಲ್ಲ ಉದ್ಯಮ ಆರಂಭಿಸಲು ಸಿಗುತ್ತೆ ಸಾಲ?

ಸುಮಾರು 88 ವಿಧದ ಸಣ್ಣ ಉದ್ಯಮ ಆರಂಭಿಸಲು ಉದ್ಯೋಗಿನಿ ಯೋಜನೆಯಡಿ ಸಾಲ ಪಡೆಯಬಹುದಾಗಿದೆ. ಇವುಗಳಲ್ಲಿ ಹೊಲಿಗೆ, ಮತ್ಸ್ಯೋದ್ಯಮ, ದಿನಸಿ ಮಾರಾಟ, ಗ್ರಂಥಾಲಯ, ಬೇಕರಿ, ಅಗರಬತ್ತಿ ತಯಾರಿಕೆ, ಡೈರಿ ಹಾಗೂ ಕುಕ್ಕುಟೋದ್ಯಮ ಕೂಡ ಸೇರಿವೆ.

ಯಾವೆಲ್ಲ ಬ್ಯಾಂಕ್​ಗಳು ಸಾಲ ನೀಡುತ್ತವೆ?

ದೇಶದ ಅನೇಕ ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಅನೇಕ ಬ್ಯಾಂಕ್​ಗಳು ಉದ್ಯೋಗಿನಿ ಯೋಜನೆಯಡಿ ಸಾಲ ನೀಡುತ್ತಿವೆ. ಪಂಜಾಬ್ ಆ್ಯಂಡ್ ಸಿಂಧ್ ಬ್ಯಾಂಕ್, ಸಾರಸ್ವತ ಬ್ಯಾಂಕ್​ಗಳಲ್ಲಿಯೂ ಸಾಲ ಪಡೆಯಹುದಾಗಿದೆ. ಇವುಗಳು ಮಾತ್ರವಲ್ಲದೆ ಎಲ್ಲ ವಾಣಿಜ್ಯ ಬ್ಯಾಂಕ್​ಗಳು, ಸಹಕಾರಿ ಬ್ಯಾಂಕ್​ಗಳಿಂದಲೂ ಸಾಲ ಪಡೆಯಬಹುದಾಗಿದೆ.

ಸಾಲ ಪಡೆಯಲು ಅರ್ಹತೆಗಳೇನು?

ಉದ್ಯೋಗಿನಿ ಯೋಜನೆಯಡಿ ಮಹಿಳೆಯರಿಗೆ ಮಾತ್ರ ಸಾಲ ದೊರೆಯುತ್ತದೆ. 18ರಿಂದ 55 ವರ್ಷಷ ವಯಸ್ಸಿನ ಮಹಿಳೆಯರು ಬಡ್ಡಿರಹಿತ ಸಾಲ ಪಡೆಯಲು ಅರ್ಹರಾಗಿದ್ದಾರೆ. ಸಾಲಕ್ಕೆ ಅರ್ಜಿ ಸಲ್ಲಿಸುವ ಮಹಿಳೆಯ ಕುಟುಂಬದ ಆದಾಯ 1.5 ಲಕ್ಷ ರೂ.ಗಿಂತ ಕಡಿಮೆ ಇರಬೇಕು. ವಿಧವೆಯರು, ಅಂಗವಿಕಲರು, ನಿರ್ಗತಿಕ ಮಹಿಳೆಯರಾದರೆ ಕುಟುಂಬದವರಿಗೆ ಹೆಚ್ಚಿನ ಆದಾಯವಿದ್ದರೂ ಸಾಲ ನೀಡಲು ಪರಿಗಣಿಸಲಾಗುತ್ತದೆ.

Scroll to Top