ಅನ್ಯಕೋಮಿನ ಜೋಡಿ ಲಾಡ್ಜ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

(ನ್ಯೂಸ್ ಕಡಬ)newskadaba.com  ಕಾಸರಗೋಡು, ಜ.21. ನಾಪತ್ತೆಯಾಗಿದ್ದ ಅನ್ಯಕೋಮಿನ ಜೋಡಿ ಲಾಡ್ಜ್ ವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ರಾಜಾಪುರ ಕಲ್ಲಾರು ಒಕ್ಲಾವು ನಿವಾಸಿ ಮಹಮ್ಮದ್ ಶರೀಫ್ (40) ಮತ್ತು ಕಲ್ಲಾರು ಅಡಕಂ ಪುಲಿಕುಳಿಯ ಸಿಂಧು (36)ಮೃತರು ಎಂದು ಗುರುತಿಸಲಾಗಿದೆ.

ಜನವರಿ 7ರಂದು ಇಬ್ಬರೂ ನಾಪತ್ತೆಯಾಗಿದ್ದರು. ಈ ಕುರಿತು ನಾಪತ್ತೆ ಪ್ರಕರಣ ದಾಖಲಿಸಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಇದೀಗ ಗುರುವಾಯೂರು ಪಡಿಯಾರ ನಾಡೆಯ  ಕೊಠಡಿಯೊಳಗೆ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರೂ ಪತ್ತೆಯಾಗಿದ್ದಾರೆ ಎಂದು ವರದಿ ತಿಳಿಸಿದೆ.

 

Scroll to Top